ಬಾಲ್ ವಿರೂಪಗೊಳಿಸಿದ ತನ್ನ ನಡೆಯನ್ನು ಸಮರ್ಥಿಸಿಕೊಂಡ ಎಬಿ ಡಿವಿಲಿಯರ್ಸ್

ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯದಲ್ಲಿ ಬಾಲ್ ವಿರೂಪಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ...
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್
Updated on
ಸೌತಾಂಪ್ಟನ್(ಇಂಗ್ಲೆಂಡ್): ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯದಲ್ಲಿ ಬಾಲ್ ವಿರೂಪಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್ ಅಂಪೈರ್ ವಿರುದ್ಧ ಕಿಡಿಕಾರಿದ್ದಾರೆ. 
ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 33ನೇ ಓವರ್ ನಲ್ಲಿ ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿವಿಲಿಯರ್ಸ್ ಪಂದ್ಯದ ಕೊನೆಯ ವೇಳೆಯಲ್ಲಿ ಚೆಂಡನ್ನು ಬದಲಾಯಿಸುವಂತೆ ನಾನು ಅಂಪೈರ್ ಹತ್ತಿರ ಮನವಿ ಮಾಡಿದೆ. ಇದಕ್ಕೆ ಕಾರಣ ಆದಾಗಲೇ ಚೆಂಡು ವಿರೂಪಗೊಂಡಿತ್ತು. ಆದರೆ ಅವರು ಬದಲಾಯಿಸಿಲ್ಲ ಎಂದು ಆರೋಪಿಸಿದ್ದಾರೆ. 
ಜವಾಬ್ದಾರಿಯುತ ನಾಯಕನಾಗಿ ಚೆಂಡಿನ ಸ್ಥಿತಿಯ ಜತೆ ಎಲ್ಲವನ್ನು ಗಮನಿಸಬೇಕಾಗಿರುತ್ತದೆ. ಈ ಬಗ್ಗೆ ಅಂಪೈರ್ ಗೆ ಮವಿ ಮಾಡಿದ್ದರು ಅವರು ಚೆಂಡನ್ನು ಬದಲಾಯಿಸಲಿಲ್ಲ ಆದ್ದರಿಂದ ನನಗೆ ಬೇಜಾರಾಗಿ ಆ ರೀತಿ ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com