ಲಂಡನ್: ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ಪಂದ್ಯವೊಂದರ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ರಿಚರ್ಡ್ ಲೆವಿ ತಲೆಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾರ್ಥ್ಂಪ್ಟನ್ ಶೈರ್ ತಂಡವನ್ನು ಪ್ರತಿನಿಧಿಸುತ್ತಿದ್ದ 29 ವರ್ಷದ ಲೆವಿ ಅವರು ವರ್ಸೆಸ್ಟರ್ಶೈರ್ ತಂಡದ ವೇಗಿ ಜೋಶ್ ಟಾಂಗ್ ಎಸೆತದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಈ ವೇಳೆ ಲೆವಿ ಅವರನ್ನು ತಕ್ಷಣ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಲ್ಮೆಟ್ ಇದ್ದುದ್ದರಿಂದ ಲೆವಿ ಅವರಿಗೆ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಅವರು ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.