ಮಿನಿ ವಿಶ್ವಕಪ್: ಇಂದಿನಿಂದ "ಐಸಿಸಿ ಚಾಂಪಿಯನ್ಸ್ ಟ್ರೋಫಿ" ಕ್ರಿಕೆಟ್ ಸಮರ

ಮಿನಿ ವಿಶ್ಪಕಪ್ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಸಮರಕ್ಕೆ ವೇದಿಕೆ ಸಿದ್ಧವಾಗಿದ್ದು, ಇಂದು ಮಧ್ಯಾಹ್ನ ಅಧಿಕೃತವಾಗಿ ಟೂರ್ನಿಗೆ ಚಾಲನೆ ನೀಡಲಾಗುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಲಂಡನ್: ಮಿನಿ ವಿಶ್ಪಕಪ್ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಸಮರಕ್ಕೆ ವೇದಿಕೆ ಸಿದ್ಧವಾಗಿದ್ದು, ಇಂದು ಮಧ್ಯಾಹ್ನ ಅಧಿಕೃತವಾಗಿ ಟೂರ್ನಿಗೆ ಚಾಲನೆ ನೀಡಲಾಗುತ್ತದೆ.

ಏಕದಿನ ಕ್ರಿಕೆಟ್ ವಿಶ್ವಕಪ್ ಮುಗಿದು 2 ವರ್ಷಗಳಾಗಿದ್ದು, ಮುಂದಿನ ವಿಶ್ವಕಪ್ ​ಗೆ ಇನ್ನೆರಡು ವರ್ಷಗಳ ಕಾಲಾವಕಾಶವಿದೆ. ಇದರ ನಡುವೆಯೇ ಮತ್ತೊಂದು ಕ್ರಿಕೆಟ್ ಮಹಾ ಸಮರಕ್ಕೆ ಇಂಗ್ಲೆಂಡ್ ವೇದಿಕೆಯಾಗಿದ್ದು, ವಿಶ್ವ ಕ್ರಿಕೆಟ್​ ನ  ‘ಚಾಂಪಿಯನ್’ ತಂಡವನ್ನು ಗುರುತಿಸಲು, ಅಗ್ರ 8 ತಂಡಗಳು ಮಾತ್ರ ಕಣದಲ್ಲಿರುವ ‘ಮಿನಿ ವಿಶ್ವಕಪ್’ ಖ್ಯಾತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಉತ್ತಮ ವೇದಿಕೆಯಾಗಿದೆ.

ಕಳೆದ ಬಾರಿಯೇ ಕೊನೆಗೊಳ್ಳಬೇಕಾಗಿದ್ದ 20 ವರ್ಷಗಳ ಇತಿಹಾಸವಿರುವ 50 ಓವರ್​ ಗಳ ಕ್ರಿಕೆಟ್ ಟೂರ್ನಿ ಅದ್ಭುತ ಯಶಸ್ಸಿನಿಂದ ಮರುಜೀವ ಪಡೆದುಕೊಂಡಿದ್ದು, ಕ್ರಿಕೆಟ್ ಜನಕ ಆಂಗ್ಲರ ನಾಡಿನಲ್ಲೇ ಮತ್ತೆ ಕಳೆಗಟ್ಟುತ್ತಿದೆ.  ಅಭ್ಯಾಸ ಪಂದ್ಯಗಳ ಸ್ಕೋರ್​ ಬೋರ್ಡ್ ಗಮನಿಸಿದರೆ ಟೂರ್ನಿಯಲ್ಲಿ ರನ್​ ಮಳೆಯ ನಿರೀಕ್ಷೆ ಹರಡಿದ್ದು, ಹಾಲಿ ಚಾಂಪಿಯನ್ ಭಾರತ ತಂಡ ಈ ಬಾರಿಯೂ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಡಲಿದೆ.

ಇನ್ನು ಇಂದು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ  ಆತಿಥೇಯ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ದೇಶಗಳು ಮುಖಾಮುಖಿಯಾಗುತ್ತಿದ್ದು. ಓವಲ್ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ ಪಂದ್ಯ ಆರಂಭವಾಗಲಿದೆ.

ಐಸಿಸಿ ಏಕದಿನ ರ್ಯಾಕಿಂಗ್ ನಲ್ಲಿ 5ನೇ ಸ್ಥಾನದಲ್ಲಿರುವ ಇಯಾನ್ ಮಾರ್ಗನ್ ಪಡೆ, 6ನೇ ಸ್ಥಾನದಲ್ಲಿರುವ ಮುಶ್ರಫೆ ಮೊರ್ತಾಜ ಪಡೆಯನ್ನು ಎದುರಿಸಲಿದೆ. ಪ್ರತೀ ಪ್ರಮುಖ ಸರಣಿಯಲ್ಲೂ ಅಚ್ಚರಿ ಫಲಿತಾಂಶ ನೀಡುವ  ಬಾಂಗ್ಲಾದೇಶ ಈ ಬಾರಿಯ ಟೂರ್ನಿಯಲ್ಲಿ ಘಾಟಾನುಘಟಿ ತಂಡಗಳಿಗೆ ಶಾಕ್ ನೀಡಲು ಸಜ್ಜಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com