ಮುಂಬೈ ಮೂಲದ ಆಟಗಾರ್ತಿ 16 ವರ್ಷದ ಜೆಮಿಮಾ ರೋಡ್ರಿಗಸ್ ಔರಂಗಬಾದ್ ನಲ್ಲಿ ನಡೆದ ಅಂಡರ್ 19 ಟೂರ್ನಮೆಂಟ್‌ವೊಂದರ ಸೌರಾಷ್ಟ್ರ ವಿರುದ್ಧದ ಏಕದಿನ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಕೇವಲ 163 ಎಸೆತಗಳನ್ನು ಎದುರಿಸಿದ ಜೆಮಿಮಾ 202 ರನ್ ಚಚ್ಚಿದ್ದರು. ಈ ಬ್ಯಾಟ್ಸ್‌ವುವೆನ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಮುಂಬಯಿ 50 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 347 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.