ಅಂಡರ್-19 ಏಷ್ಯಾಕಪ್: ರಾಹುಲ್ ದ್ರಾವಿಡ್ ನೇಪಾಳ ತಂಡವನ್ನು ಪ್ರಶಂಸಿಸಿದ್ದು ಯಾಕೆ ಗೊತ್ತಾ!

ಅಂಡರ್-19 ಏಷ್ಯಾಕಪ್ ನಲ್ಲಿ ಭಾರತ ತಂಡವನ್ನು ಸೋಲಿಸಿ ನೇಪಾಳ ಭರ್ಜರಿ ಸಂಭ್ರಮಾಚರಣೆ ನಡೆಸುತ್ತಿತ್ತು. ಈ ವೇಳೆ ನೇಪಾಳ ತಂಡದ ಡ್ರೆಸ್ಸಿಂಗ್ ರೂಂಗೆ...
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
ಕೌಲಲಾಂಪುರ: ಅಂಡರ್-19 ಏಷ್ಯಾಕಪ್ ನಲ್ಲಿ ಭಾರತ ತಂಡವನ್ನು ಸೋಲಿಸಿ ನೇಪಾಳ ಭರ್ಜರಿ ಸಂಭ್ರಮಾಚರಣೆ ನಡೆಸುತ್ತಿತ್ತು. ಈ ವೇಳೆ ನೇಪಾಳ ತಂಡದ ಡ್ರೆಸ್ಸಿಂಗ್ ರೂಂಗೆ ತೆರಳಿದ ರಾಹುಲ್ ದ್ರಾವಿಡ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. 
ರಾಹುಲ್ ದ್ರಾವಿಡ್ ಭಾರತ ಅಂಡರ್-19 ತಂಡದ ಕೋಚ್ ಆಗಿದ್ದು ಕ್ರಿಕೆಟ್ ನಲ್ಲಿ ಇದೀಗ ಬೆಳೆಯುತ್ತಿರುವ ನೇಪಾಳ ತಂಡ ಬಲಿಷ್ಠ ಭಾರತ ತಂಡವನ್ನು ಮಣಿಸಿತ್ತು. ಇದೇ ನೆಪವಾಗಿ ರಾಹುಲ್ ದ್ರಾವಿಡ್ ನೇಪಾಳ ತಂಡದ ಡ್ರೆಸ್ಸಿಂಗ್ ರೂಂಗೆ ತೆರಳಿ ವಿಜೇತ ತಂಡವನ್ನು ಅಭಿನಂದಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. 
ನೇಪಾಳ ತಂಡದ ಕೋಚ್ ಬಿನೋದ್ ಕುಮಾರ್ ಇದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಅವರದು ನಿಜಕ್ಕೂ ವಿನಮ್ರ ವ್ಯಕ್ತಿತ್ವ. ಅವರು ಗೆಲುವಿನ ಬಳಿಕ ನಮ್ಮ ತಂಡದ ಸಾಧನೆಯನ್ನು ಕೊಂಡಾಡಿ ಅಭಿನಂದನೆ ಸಲ್ಲಿಸಿದರು. ಈ ಗೆಲುವಿಗೆ ನೀವು ಬೇರೆಲ್ಲರಿಗಿಂತಲೂ ಹೆಚ್ಚು ಅರ್ಹರಾಗಿದ್ದೀರಿ, ಈ ಕೂಟದಲ್ಲಿ ಉಳಿದವರಿಗಿಂತ ಉತ್ತಮ ಪ್ರದರ್ಶನ ನೀಡಿದಿರಿ ಎಂದು ದ್ರಾವಿಡ್ ನಮ್ಮ ಗೆಲುವನ್ನು ಪ್ರಶಂಸಿಸಿದರು ಎಂದರು. 
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ 8 ವಿಕೆಟ್ ಗೆ ಕೇವಲ 185 ರನ್ ಗಳಿಸಿದರೆ ಭಾರತ 48.1 ಓವರ್ ಗಳಲ್ಲಿ 166ಕ್ಕೆ ಆಲೌಟ್ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com