ರಣಜಿ ಕ್ರಿಕೆಟ್: ಮನೀಷ್ ಪಾಂಡೆ ದ್ವಿಶತಕ, ಕರ್ನಾಟಕ 600/4 ಕ್ಕೆ ಡಿಕ್ಲೇರ್
ಉತ್ತರ ಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮನೀಷ್ ಪಾಂಡೆ ಅವರ ದ್ವಿಶತಕದ ನೆರವಿನೊಂದಿಗೆ ಕರ್ನಾಟಕ ನಾಲ್ಕು ವಿಕೆಟ್ ನಷ್ಟಕ್ಕೆ 600 ರನ್‌ಗಳ ಬೃಹತ್ ಮೊತ್ತ ದಾಖಲಿಸಿ......
ಕಾನ್ಪುರ: ಉತ್ತರ ಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮನೀಷ್ ಪಾಂಡೆ ಅವರ ದ್ವಿಶತಕದ ನೆರವಿನೊಂದಿಗೆ ಕರ್ನಾಟಕ ನಾಲ್ಕು ವಿಕೆಟ್ ನಷ್ಟಕ್ಕೆ 600 ರನ್‌ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಘೋಷಿಸಿದೆ.
ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಮನೀಷ್ ಪಾಂಡೆ 221 ರನ್ ಗಳಿಸಿದರೆ ಇನ್ನೋರ್ವ ಆಟಗಾರ ದೇಗಾ ನಿಶ್ಚಲ್ 195 ರನ್ ಗಳಿಸಿ ಾಇದು ರನ್ ಗಳ ಅಲ್ಪ ಅಂತರದಿಂದ ದ್ವಿಶತಕ ವಂಚಿತರಾದರು.
354/3 ರಿಂದ ಆಟವನ್ನು ಮುಂದುವರಿಸಿದ ಕರ್ನಾಟಕ ನಿಶ್ಚಲ್ ಹಾಗೂ ಪಾಂಡೆ ಅವರ ಜತೆಯಾಟದಿಂದ ನಾಲ್ಕನೇ ವಿಕೆಟ್‌ಗೆ 354 ರನ್ ಗಳಿಸಿತ್ತು.
ಪಾಂಡೆ 29 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳೊಡನೆ 327 ಬಾಲ್ ಗಳಲ್ಲಿ 221 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ನಿಶ್ಚಲ್ 425 ಬಾಲ್ ಗಳಿಗೆ 23 ಬೌಂಡರಿ ಸಿಡಿಸಿ 195 ರನ್ ಕಲೆಹಾಕಿದರು.
ಇದಕ್ಕೆ ಮುನ್ನ ಮೊದಲ ದಿನ ಕರ್ನಾತಕದ ಮಯಾಂಕ್ ಅಗರ್ವಾಲ್ (90),ಕರುಣ್ ನಾಯರ್ (62) ರನ್ ಗಳಿಸಿ ತಂದಕ್ಕೆ ಉತ್ತಮ ಪ್ರಾರಂಭ ಒದಗಿಸಿದ್ದರು.