ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಘನತೆಯನ್ನು ಕಳೆದುಕೊಂಡಿದೆ ಎಂದು ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ನಿರ್ವಾಹಕ ಸಮಿತಿಯ(ಸಿಒಎ) ನೇಮಕಾತಿಯ ಪ್ರಭಾವ ಬಿಸಿಸಿಐನ ಸ್ವಾಯತ್ತತೆ ಮತ್ತು ಖ್ಯಾತಿಯ ಬಗ್ಗೆ ಪ್ರಶ್ನಿಸಿದ್ದು ಹಿಂದಿನ ವರ್ಷದಲ್ಲಿ ಇದ್ದಂತೆ ಇದೀಗ ಬಿಸಿಸಿಐ ಇಲ್ಲ. ಮಂಡಳಿ ತನ್ನ ಘನತೆ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದಾಯವನ್ನೂ ಸಹ ಕಳೆದುಕೊಂಡಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಲೋಧಾ ಸಮಿತಿಯ ಶಿಫಾರಸುಗಳನ್ನು ಬಿಟ್ಟರೆ ಬಿಸಿಸಿಐ ಏನನ್ನು ಸಾಧಿಸಿಲ್ಲ ಬದಲಿಗೆ ಎಲ್ಲವನ್ನೂ ಕಳೆದುಕೊಂಡಿದೆ. ಮಂಡಳಿಯ ಸದ್ಯದ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುವ ಸಮಯ ಇದಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಅನುರಾಗ್ ಠಾಕೂರ್ ಹೇಳಿದರು.
ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ಲೋಧಾ ಸಮಿತಿಯ ಶೇಖಡ 90ರಷ್ಟು ಶಿಫಾರಸುಗಳನ್ನು ಮಾಡಿದ್ದೇವು ಆದರೆ ನನ್ನ ನಿರ್ಗಮನದ ಬಳಿಕ ಸದ್ಯದ ಮಂಡಳಿ ಯಾವುದೇ ಶಿಫಾರಸುಗಳ ಸ್ವೀಕಾರವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.