ಇದೇ ಮೊದಲ ಬಾರಿಗೆ ಪುರುಷರ ಕ್ರಿಕೆಟ್‌ಗೆ ಮಹಿಳಾ ಅಂಪೈರ್!

ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಂಪೈರ್ ಕಾರ್ಯ ನಿರ್ವಹಿಸಲಿದ್ದಾರೆ...
ಕ್ಲೇರ್ ಪೊಲೊಸಾಕ್
ಕ್ಲೇರ್ ಪೊಲೊಸಾಕ್
ಸಿಡ್ನಿ: ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಂಪೈರ್ ಕಾರ್ಯ ನಿರ್ವಹಿಸಲಿದ್ದಾರೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಮಹಿಳಾ ಕ್ರಿಕೆಟ್ ಗೆ ಹೆಚ್ಚಿನ ಮನ್ನಣೆ ಸಿಗುವಂತೆ ಮಾಡಲು ಹೆಚ್ಚು ಪ್ರಯತ್ನ ನಡೆಸುತ್ತಿದೆ. ಇದೀಗ ಕೇವಲ ಆಟಗಾರ್ತಿಯರು ಮಾತ್ರವಲ್ಲ. ಪುರುಷರ ಕ್ರಿಕೆಟ್ ನಲ್ಲಿ ಅಂಪೈರ್ ಆಗಿ ಮಹಿಳೆಯರನ್ನು ಆಯ್ಕೆ ಮಾಡಿದೆ. 
ಹರ್ಸ್ಟ್ ವಿಲ್ಲೆ ಓವಲ್ ನಲ್ಲಿ ನಡೆಯಲಿರುವ ಪುರುಷರ ಅಗ್ರ ದರ್ಜೆ ಪಂದ್ಯದಲ್ಲಿ ಮಹಿಳಾ ಅಂಪೈರ್ ಕ್ಲೇರ್ ಪೊಲೊಸಾಕ್ ಕಾಣಿಸಿಕೊಳ್ಳಲಿದ್ದಾರೆ. ಭಾನುವಾರ ನಡೆಯಲಿರುವ ನ್ಯೂ ಸೌತ್ ವೇಲ್ಸ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ನಡುವಿನ ಏಕದಿನ ಪಂದ್ಯದಲ್ಲಿ ಪೊಲೊಸಾಕ್ ಕಾರ್ಯನಿರ್ವಹಿಸಲಿದ್ದಾರೆ. 
29 ವರ್ಷದ ಕ್ಲೇರ್ ಪೊಲೊಸಾಕ್ ಈವರೆಗೂ ಯಾವುದೇ ಹಂತದಲ್ಲಿ ಕ್ರಿಕೆಟ್ ಆಡಿಲ್ಲ. ಅಲ್ಲದೇ ಕೆಲವು ಬಾರಿ ಅಂಪೈರ್ ಪರೀಕ್ಷೆಯಲ್ಲಿ ಅನುತೀರ್ಣಗೊಂಡಿದ್ದರು. ಉತ್ಸಾಹ ಕಳೆದುಕೊಳ್ಳದ ಕ್ಲೇರ್ ಪರಿಶ್ರಮ ಮುಂದುವರಿಸಿ, ಇತಿಹಾಸ ಬರೆಯುವ ಹೊಸ್ತಿಲಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com