ನುಪುರ್ ನಗರ್ ರೊಡನೆ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ನಿಶ್ಚಿತಾರ್ಥ
ಕ್ರಿಕೆಟ್
ನುಪುರ್ ನಗರ್ ಜೊತೆ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ನಿಶ್ಚಿತಾರ್ಥ
ಭಾರತ ಕ್ರಿಕೆಟ್ ತಂಡದ ಮಹತ್ವದ ಆಟಗಾರ ಭುವನೇಶ್ವರ್ ಕುಮಾರ್, ವೈವಾಹಿಕ ಜೀವನ ಪ್ರಾರಂಭಿಸಲು ಸಜ್ಜಾಗಿದ್ದಾರೆ.
ನವದೆಹಲಿ:: ಭಾರತ ಕ್ರಿಕೆಟ್ ತಂಡದ ಮಹತ್ವದ ಆಟಗಾರ ಭುವನೇಶ್ವರ್ ಕುಮಾರ್, ವೈವಾಹಿಕ ಜೀವನ ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಐದು ತಿಂಗಳ ಹಿಂದೆಯೇ ತಮ್ಮ ಅರ್ಧಾಂಗಿಯನ್ನು ಪರಿಚಯಿಸುವುದಾಗಿ ಘೋಷಿಸಿದ್ದ ಭುವನೇಶ್ವರ ಕುಮಾರ್ ಕೆಲವು ದಿನಗಳ ಹಿಂದೆ ಭಾವಿ ಪತ್ನಿ ಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಅ. 4 ರಂದು ಗ್ರೇಟರ್ ನೋಯ್ಡಾದಲ್ಲಿ ನಡೆದ ಸಮಾರಂಭದಲ್ಲಿ ನುಪುರ್ ನಗರ್ ಎನ್ನುವವರೊಡನೆ ಭುವನೇಶ್ವರ್ ನಿಶ್ಚಿತಾರ್ಥ ನಡೆದಿದೆ. ಇಬ್ಬರ ವಿವಾಹ ಇದೇ ಡಿಸೆಂಬರ್ ನಲ್ಲಿ ನಡೆವ ಸಾಧ್ಯತೆ ಇದೆ.
27ರ ಹರೆಯದ ಭಾರತೀಯ ವೇಗದ ಬೌಲರ್ ಭುವನೇಶ್ವರ್ ಇದೀಗ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸಿದ್ದಾರೆ.

