ಸೌರವ್ ಗಂಗೂಲಿ ಅವರು ಯುವಕರನ್ನು ಬೆಳೆಸಲು ತಮ್ಮ ಬ್ಯಾಟಿಂಗ್ ಸ್ಥಾನವನ್ನೇ ಹಲವು ಬಾರಿ ತ್ಯಾಗ ಮಾಡಿದ್ದಾರೆ. ಸ್ವತಃ ಸೆಹ್ವಾಗ್ ಗಾಗಿಯೂ ಗಂಗೂಲಿ ತಮ್ಮ ಆರಂಭಿಕನ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದರು. ಧೋನಿಯ ವಿಚಾರದಲ್ಲೂ ಹೀಗೆಯೇ ಆಗಿದೆ. ಒಂದು ವೇಳೆ ಗಂಗೂಲಿ ಅದನ್ನು ಮಾಡದಿದ್ದರೆ ಧೋನಿಯ ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಎಂದು ಸೆಹ್ವಾಗ್ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.