ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆ: 9 ತಂಡಗಳ ಟೆಸ್ಟ್, 13 ತಂಡಗಳ ಏಕದಿನ ಟೂರ್ನಿಗೆ ಐಸಿಸಿ ನಿರ್ಧಾರ

ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಟೆಸ್ಟ್ ಮಾನ್ಯತೆ ಪಡೆದಿರುವ 9 ತಂಡಗಳ ಟೆಸ್ಟ್ ಲೀಗ್ ಮತ್ತು 13 ತಂಡಗಳನ್ನೊಳೊಂಡ ಏಕದಿನ ಟೂರ್ನಿ ಆಯೋಜನೆಗೆ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಟೆಸ್ಟ್ ಮಾನ್ಯತೆ ಪಡೆದಿರುವ 9 ತಂಡಗಳ ಟೆಸ್ಟ್ ಲೀಗ್ ಮತ್ತು 13 ತಂಡಗಳನ್ನೊಳೊಂಡ ಏಕದಿನ ಟೂರ್ನಿ  ಆಯೋಜನೆಗೆ ನಿರ್ಧರಿಸಿದೆ.
ಐಸಿಸಿಯ ಮಹಾಧಿವೇಶನದಲ್ಲಿ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದಲ್ಲಿ ಐಸಿಸಿಯ ಮುಂದಿನ ಟೂರ್ನಿಗಳ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಏಕದಿನ ವಿಶ್ವಕಪ್ ಟೂರ್ನಿ ಮಾದರಿಯಲ್ಲೇ 9 ತಂಡಗಳ  ಟೆಸ್ಟ್ ಟೂರ್ನಿಗೆ ಐಸಿಸಿ ಯೋಜನೆ ರೂಪಿಸಿದೆ. ಪ್ರಸ್ತುತ ಟೆಸ್ಟ್ ಮಾನ್ಯತೆ ಪಡೆದಿರುವ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ ಸೇರಿದಂತೆ ಒಟ್ಟು 9 ತಂಡಗಳನ್ನೊಳಗೊಂಡ ಟೆಸ್ಟ್ ಟೂರ್ನಿ ನಡೆಸಲು ಐಸಿಸಿ ನಿರ್ಧಾರ ಕೈಗೊಂಡಿದೆ.  ಟೆಸ್ಟ್ ಟೂರ್ನಿ ಮಾತ್ರವಲ್ಲದೇ 13 ದೇಶಗಳ ತಂಡಗಳನ್ನೊಳಗೊಂಡ ಏಕದಿನ ಟೂರ್ನಿ ಆಯೋಜನೆಗೂ ಐಸಿಸಿ ನಿರ್ಧರಿಸಿದ್ದು, ವಿಶ್ವಕಪ್ ಮಾದರಿಯಲ್ಲಿ ಈ ಟೂರ್ನಿ ಆಯೋಜನೆ ಕ್ರಮ ಕೈಗೊಳ್ಳುವುದಾಗಿ ಐಸಿಸಿ ತಿಳಿಸಿದೆ.

ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಂತಹ ಟೂರ್ನಿಗಳು ಈಗಾಗಲೇ ಚಾಲ್ತಿಯಲ್ಲಿವೆಯಾದರೂ, ಕ್ರಿಕೆಟ್ ಆಡುವ ಎಲ್ಲ ರಷ್ಟ್ರಗಳ ನಡುವೆ ದ್ವಿಪಕ್ಷೀಯ ಟೂರ್ನಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ಐಸಿಸಿ ಈ 13  ತಂಡಗಳ ಏಕದಿನ ಟೂರ್ನಿಯನ್ನು ಆಯೋಜಿಸಿದೆ ಎಂದು ತಿಳಿದುಬಂದಿದೆ. ಇದಲ್ಲದೇ ಪ್ರಸ್ತುತ ಪ್ರಯೋಗಾತ್ಮಕವಾಗಿ ನಡೆಯುತ್ತಿರುವ 4 ದಿನಗಳ ಟೆಸ್ಟ್ ಪಂದ್ಯವನ್ನು ಅಧಿಕೃತವಾಗಿ ಆಯೋಜಿಸುವ ಕುರಿತೂ ಐಸಿಸಿ ನಿರ್ಧರಿಸಿದೆ.  ವಿವಿಧ ರಾಷ್ಟ್ರಗಳಲ್ಲಿ ದೇಶೀಯ 4 ದಿನಗಳ ಟೆಸ್ಟ್ ಪಂದ್ಯಗಳು ಚಾಲ್ತಿಯಲ್ಲಿದ್ದು, ಭಾರತದಲ್ಲಿ ನಡೆಯುವ ರಣಜಿ ಟೂರ್ನಿ ಕೂಡ 4 ದಿನಗಳ ಪಂದ್ಯವಾಗಿದೆ.

ಇನ್ನು ಯಾವುದೇ ರಾಷ್ಟ್ರದ ಪರ ಕ್ರಿಕೆಟ್ ಆಡುವ ಆಟಗಾರನಿಗೂ ಐಸಿಸಿ ಕೆಲ ನೀತಿಗಳನ್ನು ವಿಧಿಸಿದ್ದು, ಒಂದು ದೇಶದ ಪರ ಕ್ರಿಕೆಟ್ ಆಡುವ ಆಟಗಾರ ಆದೇಶದಲ್ಲಿ ಕನಿಷ್ಠ ಮೂರು ವರ್ಷಗಳಿಂದ ನೆಲೆಸಿರಬೇಕು..ಇದು ಪುರುಷ ಮತ್ತು  ಮಹಿಳಾ ಆಟಗಾರರಿಗೂ ಅನ್ವಯಿಸುತ್ತದೆ. ಆದರೆ ಆಟಗಾರರಿಗೆ ಸಂಬಂಧಿಸಿ ಪಾಸ್ ಪೋರ್ಟ್ ಮತ್ತು ಜನ್ಮಸ್ಥಳ ನೀತಿಯನ್ನು ಈ ಹಿಂದಿನಂತೆಯೇ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಒಂದು ವೇಳೆ ಆಟಗಾರ  ತಾನಾಡುವ ತಂಡ ಅಥವಾ ದೇಶವನ್ನು ಬದಲಿಸಬೇಕು ಎಂದು ಮನವಿ ಸಲ್ಲಿಸಿದರೆ ಆಗಲೂ ಇದೇ ನೀತಿ ಆ ಆಟಗಾರನಿಗೆ ಅನ್ವಯಿಸುತ್ತದೆ. ಅಂದರೆ ತಂಡ ಬದಲಿಸುವ ಆಟಗಾರ ತಾನು ಆಯ್ಕೆ ಮಾಡಿಕೊಂಡ ನೂತನ  ರಾಷ್ಟ್ರದಲ್ಲೂ ಕೂಡ ಕನಿಷ್ಠ ಮೂರು ವರ್ಷಗಳ ನೆಲೆಸಿರಿಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com