ಅಪಾಯಕಾರಿ ಕ್ರಿಸ್ ಕ್ರೈನ್ಸ್ ಬೌಲಿಂಗ್ ಎದುರಿಸಲು ಸಚಿನ್-ದ್ರಾವಿಡ್ ಮಾಡಿದ್ದ 'ಮಾಸ್ಟರ್' ಪ್ಲಾನ್!

ಟೀಂ ಇಂಡಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತಿನ ಅತ್ಯುನ್ನತ ರತ್ನಗಳು...
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್
ಟೀಂ ಇಂಡಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತಿನ ಅತ್ಯುನ್ನತ ರತ್ನಗಳು. 
ಇವರಿಬ್ಬರ ಜುಗುಲ್ ಬಂದಿ ಆಟದಿಂದ ಎಷ್ಟೇ ಪಂದ್ಯಗಳಲ್ಲಿ ಟೀಂ ಇಂಡಿಯಾ ವಿಜಯ ಸಾಧಿಸಿದೆ. ಇಂತಹ ಆಟಗಾರರು ಎದುರಾಳಿ ಆಟಗಾರರನ್ನು ಎದುರಿಸಲು ಕೆಲವೊಂದು ಸಹ ಮಾಸ್ಟರ್ ಪ್ಲಾನ್ ಗಳನ್ನು ಮಾಡಿದ್ದು ಉಂಟು ಅವು ಯಶಸ್ವಿಯಾಗಿವೆ. ಅಂತಹ ಮಾಸ್ಟರ್ ಪ್ಲಾನ್ ವೊಂದನ್ನು ಸಚಿನ್ ತೆಂಡೂಲ್ಕರ್ ಬಹಿರಂಗಗೊಳಿಸಿದ್ದಾರೆ. 
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ, ಬಲಗೈ ವೇಗಿ ಕ್ರಿಸ್ ಕ್ರೈನ್ಸ್ ಅಪಾಯಕಾರಿ ಎಸೆತಗಳಿಗೆ ಖ್ಯಾತರಾದವರು. ಅಂತಹ ಕ್ರಿಸ್ ಕ್ರೈನ್ಸ್ ಬೌಲಿಂಗ್ ಎದುರಿಸಲು ಸಚಿನ್ ತೆಂಡೂಲ್ಕರ್ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದರು. ನಾನ್ ಸ್ಟ್ರೈಕ್ ನಲ್ಲಿ ನಿಂತಿರುವವರು ಬ್ಯಾಟಿಂಗ್ ಮಾಡುತ್ತಿರುವವರಿಗೆ ಕೆಲ ಸಂದೇಶಗಳನ್ನು ರವಾನಿಸುತ್ತಿದ್ದೇವು. 
ಕ್ರಿಸ್ ಕ್ರೈನ್ಸ್ ಚೆಂಡನ್ನು ಯಾವ ರೀತಿ ಹಿಡಿದುಕೊಳ್ಳುತ್ತಾರೆ ಎಂಬುದನ್ನು ಗಮನಿಸಿ ಅವರು ಚೆಂಡು ಔಟ್ ಸ್ವಿಂಗ್ ಮಾಡುವುದಾದರೇ ನನ್ನ ಬ್ಯಾಟ್ ಅನ್ನು ಎಡಗೈನಲ್ಲಿ ಹಿಡಿಯುತ್ತೇನೆ. ಒಂದು ವೇಳೆ ಇನ್ ಸ್ವಿಂಗ್ ಮಾಡಿದರೆ ಆಗ ನಾನು ಬ್ಯಾಟ್ ಅನ್ನು ಬಲಗೈನಲ್ಲಿ ಹಿಡಿಯುತ್ತೇನೆ. ಹೀಗೆ ಒಬ್ಬ ಅಪಾಯಕಾರಿ ಬೌಲರ್ ಅನ್ನು ಎದುರಿಸಲು ನಾವು ಸಿದ್ದರಾದೇವು. ಇನ್ನು ಬೌಲಿಂಗ್ ವೇಳೆ ರಾಹುಲ್ ಬೌಲರ್ ಅನ್ನು ನೋಡುತ್ತಿರಲಿಲ್ಲ ನಾನು ಬ್ಯಾಟ್ ಅನ್ನು ಯಾವ ಕೈನಲ್ಲಿ ಹಿಡಿದುಕೊಂಡಿದ್ದೇನೆ ಎಂದು ನೋಡುತ್ತಿದ್ದರು ಎಂದು ಸಚಿನ್ ವಿವರವಾಗಿ ಹೇಳಿದ್ದಾರೆ. 
ಅದೇ ರೀತಿ ನಾವು ಕ್ರಿಸ್ ಕ್ರೈನ್ಸ್ ಎಸೆತಗಳನ್ನು ಬೌಂಡರಿಗೆ ಸಿಡಿಸುತ್ತಿದ್ದೇವು. ನಮ್ಮ ಈ ಮಾಸ್ಟರ್ ಪ್ಲಾನ್ ಮಾತ್ರ ಕ್ರಿಸ್ ಕ್ರೈನ್ಸ್ ಗೆ ಮಾತ್ರ ಗೊತ್ತೆ ಆಗಲಿಲ್ಲ. ಈ ಮಧ್ಯೆ ಕ್ರೈನ್ಸ್ ಔಟ್ ಸ್ವಿಂಗ್ ಅಥವಾ ಇನ್ ಸ್ವಿಂಗ್ ಎರಡನ್ನು ಮಾಡಲಿಲ್ಲ ಎಂದರೇ ಈ ಪ್ರಶ್ನೆ ಸಹ ನಮ್ಮಲ್ಲಿ ಎದ್ದಿತ್ತು. ಆಗೊಂದು ವೇಳೆ ಈ ಎರಡನ್ನು ಕ್ರೈನ್ಸ್ ಮಾಡಲಿಲ್ಲವೆಂದರೆ ಆಗ ನಾನು ಬ್ಯಾಟನ್ನು ಮಧ್ಯದಲ್ಲಿ ಹಿಡಿದುಕೊಳ್ಳುವುದಾಗಿ ಹೇಳಿದ್ದೆ ಎಂದು ಹಳೆಯ ನೆನಪೊಂದನ್ನು ಸಚಿನ್ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com