ಭಾರತದ ವಿರುದ್ಧದ ಟಿ20 ಪಂದ್ಯದ ಟಾಸ್ ವಿವಾದಕ್ಕೆ ತೆರೆ ಎಳೆದ ಶ್ರೀಲಂಕಾ ಕ್ರಿಕೆಟ್ ಮಂಡಳಿ!

ಭಾರತದ ವಿರುದ್ಧದ ಏಕೈಕ ಟಿ20 ಪಂದ್ಯದ ಟಾಸ್ ವಿಚಾರಕ್ಕೆ ಎದ್ದಿರುವ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿದ್ದು, ಈ ಸಂಬಂಧ ಕತ್ತರಿ ಪ್ರಯೋಗ ಮಾಡಲ್ಪಟ್ಟ ಟಾಸ್ ಪ್ರಕ್ರಿಯೆಯ ವಿಡಿಯೋ ತುಣುಕನ್ನು ಅಪ್ಲೋಡ್ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ಭಾರತದ ವಿರುದ್ಧದ ಏಕೈಕ ಟಿ20 ಪಂದ್ಯದ ಟಾಸ್ ವಿಚಾರಕ್ಕೆ ಎದ್ದಿರುವ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಾಗಿದ್ದು, ಈ ಸಂಬಂಧ ಕತ್ತರಿ ಪ್ರಯೋಗ ಮಾಡಲ್ಪಟ್ಟ ಟಾಸ್  ಪ್ರಕ್ರಿಯೆಯ ವಿಡಿಯೋ ತುಣುಕನ್ನು ಅಪ್ಲೋಡ್ ಮಾಡಿದೆ.
ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕತ್ತರಿ ಪ್ರಯೋಗ ಮಾಡಲ್ಪಟ್ಟ ಟಾಸ್ ಪ್ರಕ್ರಿಯೆಯ ವಿಡಿಯೋ ತುಣುಕನ್ನು ಅಪ್ಲೋಡ್ ಮಾಡಿದೆ. ಅಲ್ಲದೆ ಟಾಸ್ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳಾಗಿಲ್ಲ. ಬದಲಿಗೆ ಮ್ಯಾಚ್ ರೆಫರಿ ಆ್ಯಂಡಿ ಪೈ ಕ್ರಾಫ್ಟ್ ಅವರು "ಹೆಡ್ಸ್ ಇಂಡಿಯಾ" ಎಂದು ಹೇಳಿದ್ದಾರೆ. ಹೀಗಾಗಿ ಟಾಸ್ ನಲ್ಲಿ ಯಾವುದೇ ಗೊಂದಲ ಹಾಗೂ ವಿವಾದಗಳಿಲ್ಲ ಎಂದು ಟ್ವೀಟ್ ಮಾಡಿದೆ.
ಈ ಹಿಂದೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದಂತೆ ಟಾಸ್ ಪ್ರಕ್ರಿಯೆಯ ನಿರೂಪಕರಾಗಿದ್ದ ಭಾರತದ ಕ್ರಿಕೆಟಿಗ ಮುರಳಿ ಕಾರ್ತಿಕ್ ಟಾಸ್ ಪ್ರಕ್ರಿಯೆ ವೇಳೆ ಮ್ಯಾಚ್ ರೆಫರಿ ಆ್ಯಂಡಿ ಪೈ ಕ್ರಾಫ್ಟ್ ಹೇಳಿಕೆಯನ್ನು ತಪ್ಪಾಗಿ ಭಾವಿಸಿ ಟಾಸ್ ಗೆದಿದ್ದು ಭಾರತ ಎಂದು ಹೇಳಿದ್ದರು. ಆದರೆ ಟಾಸ್ ವೇಳೆ ಭಾರತದ ನಾಯಕ ವಿರಾಟ್ ಕೊಹ್ಲಿ ಹೆಡ್ಸ್ ಎಂದು ಹೇಳಿದ್ದರು. ಆದರೆ ರೆಫರಿ "ಟೇಲ್ ಇಂಡಿಯಾ" ಎಂದು ಗೊಂದಲದ ಹೇಳಿಕೆ ನೀಡಿದ್ದರು. ಇದಾಗ್ಯೂ ಮುರಳಿ ಕಾರ್ತಿಕ್ ನೇರವಾಗಿ ಕೊಹ್ಲಿ ಬಳಿ ಹೋಗಿ ಟಾಸ್ ಗೆದ್ದ ಕುರಿತು ಪ್ರತಿಕ್ರಿಯೆ ಪಡೆದರು. ಬಳಿಕ ಮಾತನಾಡಿದ ಶ್ರೀಲಂಕಾ ನಾಯಕ ಉಪುಲ್ ತಂರಗಾ ಕೂಡ ಟಾಸ್ ಗೆದ್ದಿದ್ದರೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗಿತ್ತು.
ಕೆಲ ಅಭಿಮಾನಿಗಳು ಶ್ರೀಲಂಕಾ ಟಾಸ್ ಗೆದ್ದಿದ್ದರೆ ಖಂಡಿತಾ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಿತ್ತು. ಆಗ ಲಂಕಾ ತಂಡವೇ ಪಂದ್ಯ ಗೆಲ್ಲುತ್ತಿತ್ತು. ಹೀಗಾಗಿ ಈ ಮ್ಯಾಚ್ ಫಿಕ್ಸ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ವಿವಾದಕ್ಕೆ ಸ್ವತಃ ಶ್ರೀಲಂಕಾ ಕ್ರಿಕೆಟ್ ಮಂಡಳಿಯೇ ತೆರೆ ಎಳೆದಿದ್ದು, ಟಾಸ್ ನಲ್ಲಿ ಯಾವುದೇ ಗೊಂದಲಗಳಾಗಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com