ಬೆನ್ ಸ್ಟೋಕ್ಸ್
ಕ್ರಿಕೆಟ್
ವಿವಾದದ ನಡುವೆಯೂ ಪ್ರತಿಷ್ಠಿತ ಆ್ಯಷಸ್ ಸರಣಿಗೆ ಬೆನ್ ಸ್ಟೋಕ್ಸ್ ಆಯ್ಕೆ
ಬ್ರಿಸ್ಟಾಲ್ ನ ನೈಟ್ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬರ ಜತೆ ಹೊಡೆದಾಟದಲ್ಲಿ ಭಾಗಿಯಾಗಿ ವಿವಾದ ಸೃಷ್ಟಿಸಿದ್ದ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರನ್ನು ಪ್ರತಿಷ್ಠಿತ...
ಲಂಡನ್: ಬ್ರಿಸ್ಟಾಲ್ ನ ನೈಟ್ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬರ ಜತೆ ಹೊಡೆದಾಟದಲ್ಲಿ ಭಾಗಿಯಾಗಿ ವಿವಾದ ಸೃಷ್ಟಿಸಿದ್ದ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರನ್ನು ಪ್ರತಿಷ್ಠಿತ ಆ್ಯಷಸ್ ಸರಣಿಗೆ ಆಯ್ಕೆ ಮಾಡಲಾಗಿದೆ.
ಕಳೆದ ಸೋಮವಾರ ಪೊಲೀಸರು ಬೆನ್ ಸ್ಟೋಕ್ಸ್ ರನ್ನು ಬಂಧಿಸಿದ್ದರಿಂದ ಬುಧವಾರ ವೆಸ್ಟ್ ಇಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಿಂದ ಸ್ಟೋಕ್ಸ್ ರನ್ನು ಅಮಾನತುಗೊಳಿಸಲಾಗಿತ್ತು.
ಆ್ಯಷಸ್ ಸರಣಿಗೆ ತಂಡದ ಆಯ್ಕೆಗೆ ಕೆಲ ದಿನಗಳು ಬಾಕಿ ಇರುವಾಗ ಅಹಿತಕರ ಘಟನೆಯಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದ ಸ್ಟೋಕ್ಸ್ ರನ್ನು ಆ್ಯಷಸ್ ಸರಣಿಗೆ ಆಯ್ಕೆ ಮಾಡಲಾಗುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿತ್ತು.
ಘಟನೆ ನಡೆದಾಗ ಬೆನ್ ಸ್ಟೋಕ್ಸ್ ಜತೆ ಸಹ ಆಟಗಾರ ಅಲೆಕ್ಸ್ ಹೇಲ್ಸ್ ಸಹ ಇದ್ದಿದ್ದರಿಂದ ಅವರು ವಿಚಾರಣೆಗೆ ಹಾಜರಾಗಬೇಕಿದ್ದರಿಂದ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಿಂದ ಕೈಬಿಡಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ