ಮೆಲ್ಬರ್ನ್: ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ತಮ್ಮ ಸ್ನೇಹಿತರಿಗೆ, ಆಪ್ತರಿಗೆ ಮಾತ್ರ ತಂಡದಲ್ಲಿ ಸ್ಥಾನ ನೀಡುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ರಾಡ್ನೆ ಹಾಗ್ ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿಭಾನ್ವಿತ ಆಟಗಾರರಿಗೆ ಸ್ಥಾನ ನೀಡದೇ ತಮ್ಮ ಸ್ನೇಹಿತರಿಗೆ ಹಾಗೂ ಆಪ್ತರಿಗೆ ಮಾತ್ರ ಆದ್ಯತೆ ನೀಡುತ್ತಿರುವುದರಿಂದ ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲಿಗೆ ಕಾರಣವಾಗಿದೆ ಎಂದು ರಾಡ್ನೆ ಹಾಗ್ ಸ್ಟೀವ್ ಸ್ಮಿತ್ ವಿರುದ್ಧ ಕಿಡಿಕಾರಿದ್ದಾರೆ.
ಸದ್ಯ ತಂಡದಲ್ಲಿ ಆಸ್ಟನ್ ಅಗರ್, ಕಾರ್ಟ್ ರೈಟ್, ಮ್ಯಾಡಿನ್ಸನ್ ಇವರೆಲ್ಲಾ ಸ್ಮಿತ್ ಅವರ ಆಪ್ತ ಸ್ನೇಹಿತರು. ಇದೇ ಕಾರಣಕ್ಕೆ ಅವರು ಕಳಪೆ ಪ್ರದರ್ಶನ ತೋರಿದರೂ ಅವರನ್ನು ತಂಡದಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಹಾಗ್ ಹೇಳಿದ್ದಾರೆ.