ಸ್ಟೀವ್ ಸ್ಮಿತ್ ಬಗ್ಗೆ ನನಗೆ ಅನುಕಂಪ ಇದೆ, ಅವರು ಮೋಸಗಾರ ಅಲ್ಲ: ಸೌರವ್ ಗಂಗೂಲಿ

ಚೆಂಡು ವಿರೂಪ ಪ್ರಕರಣದಡಿ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೇಲೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅನುಕಂಪ ವ್ಯಕ್ತಪಡಿಸಿದ್ದಾರೆ...
ಸೌರವ್ ಗಂಗೂಲಿ
ಸೌರವ್ ಗಂಗೂಲಿ
ಮುಂಬೈ: ಚೆಂಡು ವಿರೂಪ ಪ್ರಕರಣದಡಿ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೇಲೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅನುಕಂಪ ವ್ಯಕ್ತಪಡಿಸಿದ್ದಾರೆ. 
ಸ್ಟೀವ್ ಸ್ಮಿತ್ ಬಗ್ಗೆ ನನಗೆ ಅನುಕಂಪವಿದೆ. ಅವರೊಬ್ಬ ಉತ್ತಮ ಆಟಗಾರನಾಗಿದ್ದು ಮತ್ತೆ ಪುನರಾಗಮನ ಮಾಡಿ ಆಸ್ಟ್ರೇಲಿಯಾ ಪರ ರನ್ ಹೊಳೆ ಹರಿಸುತ್ತಾರೆ ಎಂಬ ನಂಬಿಕೆ ಇದೆ. ಅವರು ಮೋಸಗಾರ ಅಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. 
ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಗೆ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ನಿಷೇಧದ ಶಿಕ್ಷೆ ವಿಧಿಸಿದ್ದು ಮತ್ತೊಬ್ಬ ಆಟಗಾರ ಬೆನ್ ಕ್ರಾಫ್ಟ್ ಗೆ ಒಂಬತ್ತು ತಿಂಗಳ ನಿಷೇದದ ಶಿಕ್ಷೆ ವಿಧಿಸಿದೆ. 
ಸ್ಟೀವ್ ಸ್ಮಿತ್ ತರ ಡೇವಿಡ್ ವಾರ್ನರ್ ಹಾಗೂ ಬೆನ್ ಕ್ರಾಫ್ಟ್ ಸಹ ತಂಡಕ್ಕೆ ಮರಳಿ ಉತ್ತಮ ಪ್ರದರ್ಶನ ನೀಡಲಿ ಎಂದು ಗಂಗೂಲಿ ಶುಭಾ ಹಾರೈಸಿದರು. 
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸುವುದಕ್ಕೆ ವ್ಯವಸ್ಥಿತಿ ಷಡ್ಯಂತ್ರವನ್ನು ರೂಪಿಸಲಾಗಿತ್ತು. ಆದರೆ ಚೆಂಡು ವಿರೂಪ ಮಾಡುವ ವೇಳೆ ಬೆನ್ ಕ್ರಾಫ್ಟ್ ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿ ಬಿದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com