ಡಿಆರ್‌ಎಸ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಟೌಟ್ ತೀರ್ಪು; ವಿರಾಟ್ ಕೊಹ್ಲಿ ದಿಗ್ಬ್ರಾಂತಿ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಅಂಪೈರ್ ಮೇಲ್ಮನವಿ ಪರಾಮರ್ಶೆ(ಡಿಆರ್‌ಎಸ್) ಅನ್ನು ಅಳವಡಿಸಿಕೊಂಡಿದ್ದು...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಅಂಪೈರ್ ಮೇಲ್ಮನವಿ ಪರಾಮರ್ಶೆ(ಡಿಆರ್‌ಎಸ್) ಅನ್ನು ಅಳವಡಿಸಿಕೊಂಡಿದ್ದು ಮುಂಬೈ ವಿರುದ್ಧದ ಪಂದ್ಯದಲ್ಲಿ ಡಿಆರ್‌ಎಸ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಟೌಟ್ ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. 
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ನಡುವಿನ ಪಂದ್ಯದಲ್ಲಿ ಮುಂಬೈ 46 ರನ್ ಗಳಿಂದ ಜಯ ಗಳಿಸಿತ್ತು. ಈ ಪಂದ್ಯದ 19ನೇ ಓವರ್ ನ ಕ್ರಿಸ್ ವೋಕ್ಸ್ ಬೌಲಿಂಗ್ ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್ ಗೆ ತಾಗಿ ಕೀಪರ್ ಕೈ ಸೇರಿತು. ಅಂಪೈರ್ ಸಹ ಔಟ್ ತೀರ್ಪು ನೀಡಿದ್ದರು. 
ಆದರೆ ಈ ವೇಳೆ ಹಾರ್ದಿಕ್ ಪಾಂಡ್ಯ ಡಿಆರ್ಎಸ್ ಗೆ ಮೇಲ್ಮನವಿ ಮಾಡಿದರು. ನಂತರ ಪರಿಶೀಲಿಸಿದ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ದೃಶ್ಯಗಳ ಪರಿಶೀಲನೆ ವೇಳೆ ಬಾಲ್ ಬ್ಯಾಟ್ ಗೆ ತಾಗಿರುವುದು ಕಂಡಬಂದಿದ್ದರು. ಮೂರನೇ ಅಂಪೈರ್ ಮಾತ್ರ ನಾನೌಟ್ ತೀರ್ಪು ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. 
ಇನ್ನು ಡಿಆರ್ಎಸ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ಮೈದಾನದ ಅಂಪೈರ್ ಬಳಿ ಚರ್ಚೆ ನಡೆಸಿದರು. ಆದರೆ ಇದರಿಂದ ಪ್ರಯೋಜನವಿಲ್ಲ ಎಂದು ಭಾವಿಸಿ ಹಿಂತಿರುಗಿದರು. 
ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 17 ರನ್ ಪೇರಿಸಿದ್ದು ದೊಡ್ಡ ವಿಷಯವೇನಲ್ಲ. ಆದರೆ ಡಿಆರ್ಎಸ್ ನಲ್ಲೂ ನ್ಯಾಯಯೂತ ತೀರ್ಪು ಸಿಗದಿದ್ದರೆ ಇನ್ನೇನು ಎಂಬ ಪ್ರಶ್ನೆ ಮೂಡುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com