ಇಂಗ್ಲೆಂಡ್ ವಿರುದ್ಧದ ಪಂದ್ಯ ಸೋಲಿಗೆ ಸ್ವತಃ ಕೊಹ್ಲಿನೇ ಕಾರಣನಾ? ಅದು ಹೇಗೆ ಅಂತೀರಾ!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸೋಲಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರೇ ಕಾರಣವಾದ್ರ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ...
ವಿರಾಟ್ ಕೊಹ್ಲಿ-ನಾಸಿರ್ ಹುಸೇನ್
ವಿರಾಟ್ ಕೊಹ್ಲಿ-ನಾಸಿರ್ ಹುಸೇನ್
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸೋಲಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರೇ ಕಾರಣವಾದ್ರ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ. 
ಹೌದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೈನ್ ಇಂತಹ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಆರ್ ಅಶ್ವಿನ್ ರನ್ನು ಒಂದು ಗಂಟೆ ಅಂಗಳದಿಂದ ಹೊರ ಕಳುಹಿಸಿದ್ದ ಕೊಹ್ಲಿ ನಿರ್ಧಾರವೇ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಇಂಗ್ಲೆಂಡ್ 87ಕ್ಕೆ 7 ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿದ್ದಾಗ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಆರ್ ಅಶ್ವಿನ್ ಅವರು ಒಂದು ಗಂಟೆ ಕ್ರೀಡಾಂಗಣದಿಂದ ಹೊರ ಹೋಗಿದ್ದರು. ಇದು ಸೋಲಿಗೆ ಕಾರಣವಾಗಿದೆ. 
ಏಕೆಂದರೆ ಆ ಸಂದರ್ಭದಲ್ಲಿ ಆದಿಲ್ ರಶೀದ್ ಕ್ರೀಸ್ ನಲ್ಲಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಅಶ್ವಿನ್ ಗೆ ಬೌಲಿಂಗ್ ಮುಂದುವರಿಸುವಂತೆ ಹೇಳಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಬರುತ್ತಿತ್ತು ಎಂದು ನಾಸಿರ್ ಹೇಳಿದ್ದಾರೆ. 
ಇನ್ನು 20 ವರ್ಷದ ಯುವ ಆಟಗಾರ ಸ್ಯಾನ್ ಕುರ್ಕನ್ ಟೀಂ ಇಂಡಿಯಾ ವೇಗಿಗಳ ಬೆವರಿಳಿಸಿದ್ದು 9 ಬೌಂಡರಿ, 2 ಸಿಕ್ಸರ್ ಸಿಡಿಸಿ 63 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ನಾಸಿರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com