ಟೀಂ ಇಂಡಿಯಾ
ಕ್ರಿಕೆಟ್
ಕೇರಳ ಸಂತ್ರಸ್ತರಿಗೆ 2 ಕೋಟಿ ರು. ನೀಡಿ ಮಾನವೀಯತೆ ಮೆರೆದ ಟೀಂ ಇಂಡಿಯಾ ಕ್ರಿಕೆಟಿಗರು!
ಜಲಪ್ರಳಯಕ್ಕೆ ಸಿಕ್ಕಿ ತತ್ತರಿಸಿರುವ ಕೇರಳ ಜನತೆಯ ಸಹಾಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಮುಂದಾಗಿದ್ದಾರೆ.
ನಾಟಿಂಗ್ ಹ್ಯಾಮ್: ಜಲಪ್ರಳಯಕ್ಕೆ ಸಿಕ್ಕಿ ತತ್ತರಿಸಿರುವ ಕೇರಳ ಜನತೆಯ ಸಹಾಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಮುಂದಾಗಿದ್ದಾರೆ.
ನಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದ ಸಂಪೂರ್ಣ ಸಂಭಾವನೆಯನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡಲು ವಿರಾಟ್ ಕೊಹ್ಲಿ ಪಡೆ ಮುಂದಾಗಿದೆ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.
ಭಾರತದ ಆಟಗಾರರಿಗೆ ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ ರುಪಾಯಿಗಳಷ್ಟು ಸಂಭಾವನೆ ಲಭಿಸಲಿದೆ. ಆಗ ಒಟ್ಟು ಮೊತ್ತ 2 ಕೋಟಿ ರುಪಾಗಳಷ್ಟಾಗುತ್ತದೆ. ಇದೇ ಹಣವನ್ನು ಕೇರಳ ಮುಖ್ಯಮಂತ್ರಿ ನಿಧಿಗೆ ನೀಡಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ