ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಶ್ವಾನಗಳೆಂದರೆ ಮೊದಲಿನಿಂದಲೂ ಬಹಳ ಪ್ರೀತಿ. ಸದ್ಯ ಕ್ರಿಕೆಟ್ ನಿಂದ ವಿರಾಮ ಪಡೆದಿರುವ ಧೋನಿ ಬಿಡುವಿನ ವೇಳೆ ಶ್ವಾನಗಳೊಂದಿಗೆ ಕಾಲ ಕಳೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಎಂಎಸ್ ಧೋನಿ ತಮ್ಮ ಫಾರ್ಮ್ ಹೌಸ್ ನಲ್ಲಿ ನೆಚ್ಚಿನ ಶ್ವಾನಗಳ ಜತೆ ಕಾಲ ಕಳೆಯುತ್ತಿದ್ದಾರೆ. ಡಚ್ ಶೆಫರ್ಡ್ ನಾಯಿಗಳಿಗೆ ಧೋನಿ ಬಾಲ್ ಕ್ಯಾಚ್ ಹಿಡಿಯುವ ತರಬೇತಿ ನೀಡುತ್ತಿದ್ದು ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಲ್ಕೈದು ಶ್ವಾನಗಳಿಗೆ ಧೋನಿ ಕಲ್ಲಿನ ಮೇಲೆ ಕುಳಿತುಕೊಂಡು ಬಾಲ್ ಕ್ಯಾಚ್ ಹಿಡಿಯುವ ತರಬೇತಿ ನೀಡಿದರು. ಈ ಹಿಂದೆ ಝೋಯಾ ಎಂಬ ಹೆಸರಿನ ನಾಯಿಗೆ ರಿಂಗ್ ಮೂಲಕ ಹಾರಿ ಬರುವುದನ್ನು ಧೋನಿ ತರಬೇತಿ ನೀಡುತ್ತಿದ್ದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.