ಇನ್ಮುಂದೆ ಕ್ರಿಕೆಟ್‌ನಲ್ಲಿ ನೋ ಟಾಸ್: ನಾಣ್ಯದ ಬದಲು ಮತ್ತೇನು?

ಕ್ರಿಕೆಟ್ ಆರಂಭಕ್ಕೂ ಮುನ್ನ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಆಯ್ಕೆ ನಿರ್ಣಯಿಸಲು ಟಾಸ್ ಮಾಡಲಾಗುತ್ತದೆ. ಆದರೆ ಈ ಸಾಂಪ್ರದಾಯಿಕ ಟಾಸ್ ಗೆ ಗುಡ್ ಬೈ ಹೇಳಲಾಗುತ್ತಿದೆ. ಇನ್ನು ನಾಣ್ಯದ ಬದಲಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕ್ರಿಕೆಟ್ ಆರಂಭಕ್ಕೂ ಮುನ್ನ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಆಯ್ಕೆ ನಿರ್ಣಯಿಸಲು ಟಾಸ್ ಮಾಡಲಾಗುತ್ತದೆ. ಆದರೆ ಈ ಸಾಂಪ್ರದಾಯಿಕ ಟಾಸ್ ಗೆ ಗುಡ್ ಬೈ ಹೇಳಲಾಗುತ್ತಿದೆ. ಇನ್ನು ನಾಣ್ಯದ ಬದಲಿಗೆ ಮತ್ತೇ ನನ್ನು ಬಳಸಲಾಗುತ್ತದೆ.
ಐಪಿಎಲ್ ಮಾದರಿಯಲ್ಲೇ ಹುಟ್ಟುಕೊಂಡು ಯಶಸ್ವಿಯಾಗಿರುವ ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯಲ್ಲಿ ನಾಣ್ಯದ ಬದಲಿಗೆ ಬ್ಯಾಟನ್ನೇ ಟಾಸ್ ಗೆ ಬಳಸಿಕೊಳ್ಳಲಾಗುತ್ತಿದೆ. ನಾಣ್ಯದಲ್ಲಾದರೇ ನಾಯಕನಾದವನು ಹೆಡ್ಸ್ ಅಥವಾ ಟೇಲ್ಸ್ ಎಂದು ಕೂಗಬೇಕಿತ್ತು. 
ಆದರೆ ಈಗ ಬ್ಯಾಟ್ ಚಿಮ್ಮಿಸುವ ವೇಳೆ ನಾಯಕರು ಹಿಲ್ಸ್ ಅಥವಾ ಫ್ಲಾಟ್ಸ್ ಎಂದು ಕೂಗಬೇಕಿದೆ. ಈ ಮೂಲಕ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯ ಬರೆಯಲು ಬಿಗ್ ಬ್ಯಾಷ್ ಲೀಗ್ ಆಡಳಿತ ಮಂಡಳಿ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com