ನವದೆಹಲಿ: ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆಯುವುದು ಎಂದರೆ ದಾಖಲೆ ಸರಿ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಇದೀಗ ಮಣಿಪುರದ ವೇಗಿ ರೆಕ್ಸ್ ರಾಜಕುಮಾರ್ ಸಿಂಗ್ ಈ ದಾಖಲೆ ಮಾಡಿದ್ದಾರೆ.
ಅನಂತಪುರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಂಡರ್ 19 ಕೂಚ್ ಬಿಹಾರ್ ಕ್ರಿಕೆಟ್ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ನಲ್ಲಿ ರೆಕ್ಸ್ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ರೆಕ್ಸ್ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿ ಅರುಣಾಚಲ ಪ್ರದೇಶ ಕೇವಲ 36 ರನ್ ಗಳಿಗೆ ಆಲೌಟ್ ಆಯಿತು. 9.5 ಓವರ್ ಬೌಲಿಂಗ್ ಮಾಡಿದ ರೆಕ್ಸ್ 6 ಮೇಡನ್ ಓವರ್ ಸಹಿತ ಕೇವಲ 11 ರನ್ ಗಳನ್ನು ನೀಡಿ 10 ವಿಕೆಟ್ ಪಡೆದರು.
Rex Rajkumar Singh took 10 wickets in a Cooch Behar Trophy for Manipur against Arunachal Pradesh in the second innings.