ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಡೆದ 3 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದ್ದು, ಕ್ರಿಕೆಟ್ ವೃತ್ತಿ ಜೀವನದ 17 ನೇ ಶತಕ ದಾಖಲಿಸುವ ಮೂಲಕ ಪೂಜಾರ, ಸೌರವ್ ಗಂಗೂಲಿ ಅವರ ದಾಖಲೆ ಮುರಿದಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 16 ಶತಕಗಳನ್ನು ದಾಖಲಿಸಿದ್ದರು. ಇದೇ ವೇಳೆ 17 ಶತಕಗಳನ್ನು ಹೊಂದಿದ್ದ ವಿವಿಎಸ್ ಲಕ್ಷ್ಮಣ್ ಅವರ ದಾಖಲೆಯೊಂದಿಗೆ ಪೂಜಾರ ಸಮಬಲ ಸಾಧಿಸಿದ್ದಾರೆ.