ಸೆಂಚೂರಿಯನ್ ನಲ್ಲಿ ನಡೆದ ಟೂರ್ನಿಯ ಆರನೇ ಹಾಗೂ ಅಂತಿಮ ಪಂದ್ಯದಲ್ಲಿ ಕೊಹ್ಲಿ, ಅಜೇಯ 129 ರನ್ ಗಳಿಸಿ ತಂಡಕ್ಕೆ 8 ವಿಕೆಟ್ ಭರ್ಜರಿ ಜಯ ತಂದಿತ್ತಿದ್ದರು. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಟೂರ್ನಿಯಲ್ಲಿ ಕೊಹ್ಲಿ ಪ್ರದರ್ಶನದ ಕುರಿತು ಮಾತನಾಡಿದ ಕೋಚ್ ರವಿಶಾಸ್ತ್ರಿ, ಕೊಹ್ಲಿ ಬ್ಯಾಟಿಂಗ್ ಕಲೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರವಿಶಾಸ್ತ್ರಿ, ಬಹುಶಃ ನೀವು ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಕುರಿತು ಬರೆಯಲು ಹೊಸ ಪದಗಳಿಗಾಗಿ ಹುಡುಕುತ್ತಿರಬಹುದು. ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಬಣ್ಣಿಸಲು ಹೊಸ ಆಕ್ಸ್ ಫರ್ಡ್ ನಿಘಂಟು ಬೇಕು ಎಂದೆನಿಸುತ್ತದೆ ಎಂದು ಶಾಸ್ತ್ರಿ ಹೇಳಿದ್ದಾರೆ.