ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಯಶಸ್ಸನ್ನು ಪತ್ನಿ ಅನುಷ್ಕಾಗೆ ಅರ್ಪಿಸಿದ ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 5-1 ಅಂತರದಲ್ಲಿ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸರಣಿಯಲ್ಲಿನ ತಮ್ಮ ಯಶಸ್ಸನ್ನು ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 5-1 ಅಂತರದಲ್ಲಿ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸರಣಿಯಲ್ಲಿನ ತಮ್ಮ ಯಶಸ್ಸನ್ನು ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ.
ಆರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ 5-1 ಅಂತರದಲ್ಲಿ ಗೆದ್ದಿದ್ದು, ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ನಾಯಕ ಕೊಹ್ಲಿ ಸರಣಿ ಶ್ರೇಷ್ಟರಾಗಿದ್ದಾರೆ. 6 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಭರ್ಜರಿ 500ಕ್ಕೂ  ಅಧಿಕ ರನ್ ಕಲೆಹಾಕಿದ್ದು, ದ್ವಿಪಕ್ಷೀಯ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್ ಕಲೆ ಹಾಕಿದ ವಿಶ್ವದ ಮೊದಲ ಬ್ಯಾಟ್ಸಮನ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಇನ್ನು ಕೊಹ್ಲಿ ಏಕದಿನ ಸರಣಿಯಲ್ಲಿನ ತಮ್ಮ ಯಶಸ್ಸನ್ನು ಪತ್ನಿ ಅನುಷ್ಕಾ ಶರ್ಮಾರಿಗೆ ಅರ್ಪಿಸಿದ್ದು, ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಧನ್ಯವಾದ ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ನನಗೆ ತೀರಾ ಹತ್ತಿರ ಇರುವ  ವ್ಯಕ್ತಿಯೇ ನನ್ನ ಯಶಸ್ಸಿಗೆ ಕಾರಣ ಎಂದು ಹೇಳಿದ್ದಾರೆ.
ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಲ್ಲಿ ಸೋತಿತ್ತು. ಈ ಸರಣಿ ಸೋಲಿನ ಬಳಿಕ ಕೊಹ್ಲಿ ಬೆನ್ನಿಗೆ ನಿಂತಿದ್ದ ಅನುಷ್ಕಾ ಅವರನ್ನು ಉತ್ತಮ ಪ್ರದರ್ಶನ ನೀಡುವತ್ತ ಉತ್ತೇಜಿಸಿದ್ದರಂತೆ. ಈ ಬಗ್ಗೆ ಸ್ವತಃ ಕೊಹ್ಲಿಯೇ ಹೇಳಿದ್ದು,  ಟೂರ್ನಿಯುದ್ದಕ್ಕೂ ಅನುಷ್ಕಾ ನನಗೆ ತಮ್ಮ ಬೆಂಬಲ ನೀಡಿದ್ದರು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನಿಜಕ್ಕೂ 5-1 ಅಂತರದಲ್ಲಿ ಸರಣಿ ಗೆದ್ದಿರುವುದು ಅದ್ಬುತ ಅನುಭವವಾಗಿದೆ. ನನ್ನ ಕ್ರಿಕೆಟ್ ವೃತ್ತಿ ಜೀವನದ  ಪ್ರತಿಯೊಂದು ಕ್ಷಣವನ್ನೂ ನಾನು ಅವಿಸ್ಮರಣೀಯವಾಗಿಸಿಕೊಳ್ಳಲು ಯತ್ನಿಸುತ್ತೇನೆ. ಬಹುಶಃ ನನ್ನ ಯಶಸ್ಸಿನಲ್ಲಿ ಇದೂ ಕೂಡ ಕಾರಣವಾಗಿರಬಹುದು. 
ನಾನು ಇನ್ನು 8 ಅಥವಾ 9 ವರ್ಷ ಕ್ರಿಕೆಟ್ ಆಡಬಹುದು. ಹೀಗಾಗಿ ಇಷ್ಟು ಕಡಿಮೆ ಅವಧಿಯಲ್ಲಿನ ನನ್ನ ಕ್ರಿಕೆಟ್ ಜೀವನದ ಪ್ರತಿಯೊಂದು ಕ್ಷಣವೂ ಅವಿಸ್ಮರಣೀಯವಾಗಿರಬೇಕು. ಆ ನಿಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡಲು  ಹಾತೊರೆಯುತ್ತೇನೆ. ದೇವರ ಆಶೀರ್ವಾದ ಮತ್ತು ಪ್ರೀತಿಯಿಂದಾಗಿ ನಾನು ಫಿಟ್ ಮತ್ತು ಆರೋಗ್ಯವಾಗಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಾದ ಸೋಲನ್ನು ಭಾರತ ತಂಡ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಂಡಿದ್ದು, 6 ಪಂದ್ಯಗಳ ಏಕದಿನ ಸರಣಿಯನ್ನು 5-1ರ ಅಂತರದಲ್ಲಿ ಗೆಲ್ಲುವ ಮೂಲಕ ಬಲಾಢ್ಯ ದಕ್ಷಿಣ ಆಪ್ರಿಕಾ  ತಂಡವನ್ನು ಹೀನಾಯವಾಗಿ ಸೋಲಿಸಿದೆ. ಅಲ್ಲದೆ ಇದೇ ಸರಣಿಯಲ್ಲೇ ದಕ್ಷಿಣ ಆಫ್ರಿಕಾದ ಏಕದಿನ ಅಗ್ರ ಸ್ಥಾನವನ್ನೂ ಭಾರತ ಕಸಿದಿದ್ದು, ಇದೀಗ ಭಾರತ ತಂಡ ಅಗ್ರ ಸ್ಥಾನಕ್ಕೇರಿದೆ. ಈ ಸರಣಿಯಲ್ಲಿ ಕೊಹ್ಲಿ ಒಟ್ಟು 6 ಪಂದ್ಯಗಳಿಂದ  558 ರನ್ ಪೇರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com