ದಕ್ಷಿಣ ಆಫ್ರಿಕಾಗೆ 189 ರನ್ ಗಳ ರನ್ ಗಳ ಗುರಿ ನೀಡಿದ ಭಾರತ
ಕ್ರಿಕೆಟ್
ದಕ್ಷಿಣ ಆಫ್ರಿಕಾಗೆ 189 ರನ್ ಗಳ ರನ್ ಗಳ ಗುರಿ ನೀಡಿದ ಭಾರತ
ಸೆಂಚ್ಯೂರಿಯನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಎದುರಾಳಿಗಳಿಗೆ ಗೆಲ್ಲಲು 189 ರನ್ ಗಳ ಗುರಿ ನೀಡಿದೆ.
ಸೆಂಚ್ಯೂರಿಯನ್: ಸೆಂಚ್ಯೂರಿಯನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಎದುರಾಳಿಗಳಿಗೆ ಗೆಲ್ಲಲು 189 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ ಭಾರತದ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸುವುದಕ್ಕೆ ಹರಸಾಹಸ ಪಡಬೇಕಾಯಿತು. ಭಾರತ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 188 ರನ್ ಗಳಿಸಿತು.
ಮನೀಷ್ ಪಾಂಡೆ 48 ಎಸೆತಗಳಲ್ಲಿ 79 ರನ್ (ಔಟಾಗದೇ) ಗಳಿಸಿದರೆ ಎಂಎಸ್ ಧೋನಿ 28 ಎಸೆತಗಳಲ್ಲಿ 52 ರನ್ (ಔಟಾಗದೇ) ಗಳಿಸಿ ತಂಡ ಹೆಚ್ಚಿನ ರನ್ ಗಳಿಸಲು ನೆರವಾದರು.
ದಕ್ಷಿಣ ಆಫ್ರಿಕಾ ಪರ ಜ್ಯೂನಿಯರ್ ಡಾಲ 2 ವಿಕೆಟ್ ಗಳಿಸಿದರೆ, ಫೆಲುಕ್ವಾಯೋ ಹಾಗೂ ಜೀನ್ಪಾಲ್ ಡುಮಿನಿ ತಲಾ ಒಂದು ವಿಕೆಟ್ ಉರುಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ