ಸಂಗ್ರಹ ಚಿತ್ರ
ಕ್ರಿಕೆಟ್
ದಕ್ಷಿಣ ಆಫ್ರಿಕಾದ ಬೌಲಿಂಗ್ ಉತ್ತಮವಾಗಿತ್ತು: ಮನೀಷ್ ಪಾಂಡೆ
ದಕ್ಷಿಣ ಆಫ್ರಿಕಾದ ಬೌಲಿಂಗ್ ಉತ್ತಮವಾಗಿತ್ತು. ಇದೇ ಕಾರಣದಿಂದಾಗಿ ಭಾರತಕ್ಕೆ ಇನ್ನೂ 20-30ರನ್ ಗಳ ಕೊರತೆಯಾಯಿತು ಎಂದು ಭಾರತ ತಂಡದ ಬ್ಯಾಟ್ಸಮನ್ ಮನೀಷ್ ಪಾಂಡೆ ಹೇಳಿದ್ದಾರೆ.
ಸೆಂಚೂರಿಯನ್: ದಕ್ಷಿಣ ಆಫ್ರಿಕಾದ ಬೌಲಿಂಗ್ ಉತ್ತಮವಾಗಿತ್ತು. ಇದೇ ಕಾರಣದಿಂದಾಗಿ ಭಾರತಕ್ಕೆ ಇನ್ನೂ 20-30ರನ್ ಗಳ ಕೊರತೆಯಾಯಿತು ಎಂದು ಭಾರತ ತಂಡದ ಬ್ಯಾಟ್ಸಮನ್ ಮನೀಷ್ ಪಾಂಡೆ ಹೇಳಿದ್ದಾರೆ.
ನಿನ್ನೆ ಸೆಂಚೂರಿಯನ್ ನಲ್ಲಿ ನಡೆದ 2ನೇ ಟಿ20 ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತ ತಂಡದ ಆಟಗಾರ ಮನೀಷ್ ಪಾಂಡೆ, ದಕ್ಷಿಣ ಆಫ್ರಿಕಾದ ಬೌಲಿಂಗ್ ಉತ್ತಮವಾಗಿತ್ತು. ನಮಗೆ 20-30 ರನ್ ಗಳ ಕೊರತೆ ಎದುರಾಗಿತ್ತು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮನೀಷ್ ಪಾಂಡೆ, ನಿರ್ಣಾಯಕ ಘಟ್ಟದಲ್ಲಿ ದಕ್ಷಿಣ ಆಫ್ರಿಕಾದ ಬೌಲಿಂಗ್ ಉತ್ತಮವಾಗಿತ್ತು. ನಮ್ಮ ಮೇಲೆ ಆಫ್ರಿಕನ್ ಬೌಲರ್ ಗಳು ಒತ್ತಡ ಹೇರಿದರು. ಪಿಚ್ ಕೂಡ ಕೊಂಚ ನಿಧಾನಗತಿಯಲ್ಲಿತ್ತು. ಆದರೆ ಪಿಚ್ ನ ಲಾಭ ಪಡೆಯುವಲ್ಲಿ ನಾವು ವಿಫಲರಾದೆವು. ಆಫ್ರಿಕಾದ ಬೌಲಿಂಗ್ ವೇಗ ಕಡಿಮೆಯಾಗಬಹುದು ಎಂದು ಭಾವಿಸಿದ್ದೆವು. ಅದರು ನಿಧಾನಗತಿಯ ಬೌಲಿಂಗ್ ಟ್ರ್ಯಾಕ್ ನಲ್ಲೂ ಆಪ್ರಿಕನ್ನರು ಉತ್ತಮ ವೇಗದಲ್ಲೇ ಬೌಲಿಂಗ್ ಮಾಡಿದರು. ಹೀಗಾಗಿ ನಮ್ಮ ರನ್ ವೇಗಕ್ಕೆ ಕಡಿವಾಣ ಬಿತ್ತು ಎಂದು ಪಾಂಡೆ ಹೇಳಿದ್ದಾರೆ.
ನಿನ್ನೆ ಸೆಂಚೂರಿಯನ್ ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ 6 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಭಾರತ ನೀಡಿದ 189 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 18.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿ ಗೆಲುವು ಸಾಧಿಸಿತು. ಈ ಪಂದ್ಯದ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ಹಾಲಿ ಸರಣಿಯಲ್ಲಿ 1-1 ಸಮಬಲ ಸಾಧಿಸಿದಂತಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ