ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯ ಡ್ರಾ; ಮೆಲ್ಬರ್ನ್ ಮೈದಾನಕ್ಕೆ ಐಸಿಸಿ ಕಳಪೆ ರೇಟಿಂಗ್!

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ...
ಮೆಲ್ಬರ್ನ್ ಕ್ರಿಕೆಟ್ ಮೈದಾನ
ಮೆಲ್ಬರ್ನ್ ಕ್ರಿಕೆಟ್ ಮೈದಾನ
ಮೆಲ್ಬರ್ನ್: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮೆಲ್ಬರ್ನ್ ಮೈದಾನಕ್ಕೆ ಕಳಪೆ ರೇಟಿಂಗ್ ಕೊಟ್ಟಿದೆ. 
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಗಾಗಿ ನಿರ್ಜೀವ ಮೈದಾನವನ್ನು ಬಳಸಲಾಗಿತ್ತು ಎಂದು ಆಟಗಾರರು ಮತ್ತು ವಿಮರ್ಶಕರು ಟೀಕಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮ್ಯಾಚ್ ರೆಫ್ರಿ ರಂಜನ್ ಮದುಗಾಲೆಯವರು ಕ್ರೀಡಾ ಆಡಳಿತ ಮಂಡಳಿಗೆ ನೀಡಿದ ತಮ್ಮ ಅಧಿಕೃತ ವರದಿಯಲ್ಲಿ ಕಳಪೆ ರೇಟಿಂಗ್ ನೀಡಿದ್ದರು.
ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ ಕಳಪೆ ರೇಟಿಂಗ್ ಪಡೆದ ಮೊದಲ ಪಂದ್ಯ ಹಾಗೂ ಮೊದಲ ಮೈದಾನ ಇದಾಗಿದೆ. ಇನ್ನು ಅಸ್ತಿತ್ವದಲ್ಲಿರುವ ಐಸಿಸಿ ನಿಯಮವಳಿಗಳ ಅಡಿಯಲ್ಲಿ ಐಸಿಸಿ ಅಧಿಕೃತ ಎಚ್ಚರಿಕೆ ನೀಡಿ ದಂಡವನ್ನು ಪಡೆಯಬಹುದು. ಆದರೆ ನಿಯಮಾವಳಿಗಳ ಪ್ರಕಾರ ಗುರುವಾರ ಈ ನಿಯಮ ಅನ್ವಯವಾಗುತ್ತದೆ.
ಈ ಹಿಂದೆ ಐಸಿಸಿ ಪುಣೆ ಮೈದಾನಕ್ಕೆ ಕಳಪೆ ರೇಟಿಂಗ್ ಕೊಟ್ಟಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿತ್ತು. 
ಆಶಸ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 327 ರನ್ ಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 491 ರನ್ ಗೆ ಸರ್ವಪತನ ಕಂಡಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com