ನಿರ್ಣಾಯಕ ಘಟ್ಟದತ್ತ ಮೊದಲ ಟೆಸ್ಟ್; 2ನೇ ದಿನದಾಟದಂತ್ಯಕ್ಕೆ ಆಫ್ರಿಕಾ 65ಕ್ಕೆ 2 ವಿಕೆಟ್

2ನೇ ಇನ್ನಿಂಗ್ಸ್ ಆರಂಭಿಸಿರುವ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 65ರನ್ ಗಳಿಸಿ ಒಟ್ಟಾರೆ 2ನೇ ಇನ್ನಿಂಗ್ಸ್ ನಲ್ಲಿ 145 ರನ್ ಗಳ ಮುನ್ನಡೆ ಸಾಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೇಪ್ ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಭಾರತವನ್ನು ಕೇವಲ 209 ರನ್ ಗಳಿಗೆ ಆಲ್ ಔಟ್ ಮಾಡಿದೆ. ಅಲ್ಲದೆ 2ನೇ ಇನ್ನಿಂಗ್ಸ್ ಆರಂಭಿಸಿ 2 ವಿಕೆಟ್ ನಷ್ಟಕ್ಕೆ  65ರನ್ ಗಳಿಸಿ ಒಟ್ಟಾರೆ 2ನೇ ಇನ್ನಿಂಗ್ಸ್ ನಲ್ಲಿ 145 ರನ್ ಗಳ ಮುನ್ನಡೆ ಸಾಧಿಸಿದೆ.
ನಿನ್ನೆ ನಡೆದ 2ನೇ ದಿನದಾಟದ ವೇಳೆ ಭಾರತ ಕೇವಲ 209 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಪರ ಹಾರ್ದಿಕ್ ಪಾಂಡ್ಯಾ ಗಳಿಸಿದ ವೈಯುಕ್ತಿಕ 93 ರನ್ ಗಳು ಭಾರತ ಮಾನ ಕಾಪಾಡಿತು. ಇನ್ನು  ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯಾ ಅವರ ನಡುವಿನ 8 ವಿಕೆಟ್ ಜೊತೆಯಾಟದಲ್ಲಿ ಹರಿದು ಬಂದ 99 ರನ್ ಗಳ ಜೊತೆಯಾಟ ಕೂಡ ಭಾರತ ಇನ್ನಿಂಗ್ಸ್ ನ ಹೈಲೈಟ್ಸ್ ಆಗಿತ್ತು. 
ಇನ್ನು ಭಾರತ ಆಲ್ ಔಟ್ ಆದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ ತಂಡ, ಮೊದಲ ಇನಿಂಗ್ಸ್‌ನಲ್ಲಿ ಆಗಿದ್ದ ತಪ್ಪುಗಳನ್ನು ಪುನರಾವರ್ತಿಸದೆ ಆಡಿತು. ಆಫ್ರಿಕಾದ ಆರಂಭಿಕರಾದ ಡೀನ್ ಎಲ್ಗರ್(25 ರನ್) ಹಾಗೂ  ಮಾರ್ಕ್‌ರಾಮ್(34 ರನ್) ಮೊದಲ ವಿಕೆಟ್‌ ಗೆ 52ರನ್ ಜತೆಯಾಟವಾಡಿದರು. ಆದರೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದ ಈ ಇಬ್ಬರೂ ಆಟಗಾರರನ್ನು ಹಾರ್ದಿಕ್ ಪಾಂಡ್ಯಾ ಪೆವಿಲಿಯನ್ ಗೆ ಅಟ್ಟಿದರು. ಮಾರ್ಕ್‌ರಾಮ್, ಭುವಿಗೆ  ಕ್ಯಾಚ್ ನೀಡಿದರೆ, ಎಲ್ಗಾರ್ ವಿಕೆಟ್ ಕೀಪರ್ ಸಾಹಗೆ ಕ್ಯಾಚ್ ಕೊಟ್ಟು ಹೊರನಡೆದರು. 
ಬಳಿಕ ಬಂದ ಹಶೀಂ ಆಮ್ಲ ಮತ್ತು ನೈಟ್‌ ವಾಚ್‌ಮನ್ ಆಗಿ ಕಣಕ್ಕಿಳಿದಿರುವ ಕಗಿಸೊ ರಬಾಡ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com