ಕರ್ನಾಟಕಕ್ಕೆ ಅದೃಷ್ಟದ ಗೆಲುವು ತಂದ ಆ 2 ರನ್ ಬಂದಿದ್ದು ಹೇಗೆ ಗೊತ್ತಾ!

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ 2 ರನ್ ಗಳಿಂದ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ...
ಮೆಹ್ದಿ ಹಸನ್ ಬೌಂಡರಿ ಗೆರೆ ತುಳಿದಿರುವ ದೃಶ್ಯ
ಮೆಹ್ದಿ ಹಸನ್ ಬೌಂಡರಿ ಗೆರೆ ತುಳಿದಿರುವ ದೃಶ್ಯ
ವಿಶಾಖಪಟ್ಟಣ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ 2 ರನ್ ಗಳಿಂದ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. 
ಕರ್ನಾಟಕದ ಇನ್ನಿಂಗ್ಸ್ ನ 2ನೇ ಓವರ್ ನ 4ನೇ ಎಸೆತದಲ್ಲಿ ಕರುಣ್ ನಾಯರ್ ಬಾರಿಸಿದ ಚೆಂಡನ್ನು ಮೆಹ್ದಿ ಹಸನ್ ಬೌಂಡರಿ ಗೆರೆ ಬಳಿ ತಡೆದರು. ಆಗ ಇದನ್ನು ಸರಿಯಾಗಿ ಗಮನಿಸದ ಅಂಪೈರ್ ಉಲ್ಲಾಸ್ ಗಾಂದೆ ಕೇವಲ 2 ರನ್ ನೀಡಿದ್ದರು. ಆದರೆ ಹಸನ್ ಚೆಂಡು ಹಿಡಿಯುವ ವೇಳೆ ಅವರ ಎಡಗಾಲು ಬೌಂಡರಿ ಗೆರೆಗೆ ತಾಗಿತ್ತು. 
ನಂತರ ಚಿತ್ರಗಳಲ್ಲಿ ಗಮನಿಸಿ ಇನಿಂಗ್ಸ್ ಮುಗಿದ ಬಳಿಕ ಕರ್ನಾಟಕಕ್ಕೆ 2 ರನ್ ನೀಡಲಾಯಿತು. ಇದಕ್ಕೆ ಹೈದರಾಬಾದ್ ತಂಡದ ನಾಯಕ ಅಂಬಟಿ ರಾಯುಡು ಸೇರಿದಂತೆ ಕೆಲ ಆಟಗಾರರು ಕೆಲಕಾಲ ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಕರ್ನಾಟಕ ತಂಡ ಈ 2 ರನ್ ಗಳಿಂದಲೇ ಜಯ ದಾಖಲಿಸಿದ್ದು ಅದೃಷ್ಟಕ್ಕೆ ಸಾಕ್ಷಿಯಾಯಿತು. 
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತ್ತು. ಆದರೆ ನಂತರ ಅಂಪೈರ್ ನೀಡಿದ 2 ರನ್ ಸೇರಿ 205 ರನ್ ಕಲೆಹಾಕಿದಂತಾಯಿತು. ಪ್ರತಿಯಾಗಿ ಹೈದರಾಬಾದ್ ನಿಗತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ 2 ರನ್ ಗಳಿಂದ ಸೋಲು ಕಂಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com