ಹಶೀಂ ಆಮ್ಲಾ ರನೌಟ್ ಬಳಿಕ ದಕ್ಷಿಣ ಆಫ್ರಿಕಾ ಹಠಾತ್ ಕುಸಿತ

ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಹಠಾತ್ ಕುಸಿತ ಕಾಣುವ ಮೂಲಕ 269ಕ್ಕೆ 6 ವಿಕೆಟ್ ಕಳೆದುಕೊಂಡಿದೆ.
ಆರ್ ಅಶ್ವಿನ್ ವಿಕೆಟ್ ಸಂಭ್ರಮ
ಆರ್ ಅಶ್ವಿನ್ ವಿಕೆಟ್ ಸಂಭ್ರಮ
ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಹಠಾತ್ ಕುಸಿತ ಕಾಣುವ ಮೂಲಕ 269ಕ್ಕೆ 6 ವಿಕೆಟ್ ಕಳೆದುಕೊಂಡಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕರಾದ ಡೀನ್ ಎಲ್ಗಾರ್ (31 ರನ್) ಮತ್ತು ಮರ್ಕರ್ಮ್ (94 ರನ್) ಉತ್ತಮ ಆರಂಭ ಒದಗಿಸಿದರು. ಆದರೆ ಎಲ್ಗಾರ್ 31 ರನ್ ಗಳಿಸಿದ್ದಾಗ ಅಶ್ವಿನ್ ಗೆ  ಬಲಿಯಾದರು. ಬಳಿಕ ಕ್ರೀಸ್ ಗೆ ಬಂದ ಹಶೀಂ ಆಮ್ಲಾ ಉತ್ತಮವಾಗಿ ಬ್ಯಾಟಿಂದ್ ಪ್ರದರ್ಶನ ನೀಡಿದರು. ಭಾರತ ಮಾಡಿದ ಎರಡು ತಪ್ಪುಗಳನ್ನು ಸಮರ್ಥವಾಗಿ ಬಳಸಿಕೊಂಡು 82 ರನ್ ಗಳ ಅಮೂಲ್ಯ ಕಾಣಿಕೆ ನೀಡಿ ರನೌಟ್  ಆದರು. ಆಮ್ಲಾಗೆ ಭಾರತ ನೀಡಿದ ಎರಡು ಜೀವದಾನಗಳು ದುಬಾರಿಯಾಗಿ ಪರಿಣಮಿಸಿದವು. ಬಳಿಕ 94 ರನ್ ಗಳಿಸಿದ್ದ ಮರ್ಕರ್ಮ್ ರನ್ನು ಮತ್ತೆ ಅಶ್ವಿನ್ ಔಟ್ ಮಾಡಿದರು.
ಬಳಿಕ ಬಂದ ಡಿವಿಲಿಯರ್ಸ್ 20 ರನ್ ಗಳಿಸಿ ಔಟ್ ಆದರೆ ಅವರ ಬೆನ್ನಲ್ಲೇ ಆಮ್ಲಾ ರನೌಟ್ ಆದರು. ಹಶೀಮ್ ಆಮ್ಲಾ ವಿಕೆಟ್ ಭಾರತೀಯ ಬೌಲರುಗಳಿಗೆ ಕಬ್ಬಿಣದ ಕಡಲೆಯಾಗುವ ಪರಿಸ್ಥಿತಿ ನಿರ್ಮಾಣವಾಗುವ ಸಂದರ್ಭ,  ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮದೇ ಬೌಲಿಂಗ್ ನಲ್ಲಿ ರನೌಟ್ ಮಾಡುವ ಮೂಲಕ ಪ್ರವಾಸಿಗರಿಗೆ ದೊಡ್ಡ ಬ್ರೇಕ್ ಕೊಡಿಸಿದರು. ನಂತರ ಬಂದ ವಿಕೆಟ್ ಕೀಪರ್ ಕ್ವಿಂಟನ್ ಡಿ’ಕಾಕ್ ತಾವು ಎದುರಿಸಿದ ಮೊದಲ ಎಸೆತದಲ್ಲೇ  ಅಶ್ವಿನ್ ವಿಕೆಟ್ ಒಪ್ಪಿಸಿ, ಬಂದ ದಾರಿಯಲ್ಲೇ ಪೆವಿಲಿಯನ್ ಸೇರಿಕೊಂಡರು. ವೇಗಿ ಫಿಲಾಂಡರ್ ಕೂಡ ರನೌಟ್ ಗೆ ಬಲಿಯಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ (24 ರನ್), ಕೇಶವ್ ಮಹಾರಾಜ್  (10ರನ್)2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮೊದಲ ದಿನ ಉತ್ತಮ ಪ್ರದರ್ಶನ ನೀಡಿದ ಆರ್ ಅಶ್ವಿನ್ 81 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಇಶಾಂತ್ ಶರ್ಮಾ 32 ರನ್ ನೀಡಿ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com