ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಅರ್ಧ ಶತಕ ಸಿಡಿಸಿದಕ್ಕೆ ಅವರನ್ನು ಅಭಿನಂದಿಸುವ ಭರದಲ್ಲಿ ದಕ್ಷಿಣ ಆಫ್ರಿಕಾ ಸಂಸ್ಥೆ ಎಡವಟ್ಟು ಮಾಡಿದೆ.
ಚೇತೇಶ್ವರ ಪೂಜಾರ ಅವರ ಚಿತ್ರದ ಬದಲಿಗೆ ಆರ್ ಅಶ್ವಿನ್ ಅವರ ಚಿತ್ರವನ್ನು ಆಫ್ರಿಕಾ ಕ್ರಿಕೆಟ್ ಸಂಸ್ಥೆ ಟ್ವೀಟ್ ಮಾಡಿ ಪೂಜಾರಗೆ ಅಭಿನಂದನೆ ಸಲ್ಲಿಸಿತ್ತು. ಇದನ್ನು ಗಮನಿಸಿದ ಅಭಿಮಾನಿಗಳು ಲೇವಡಿ ಮಾಡಿದರು. ಇದರಿಂದ ಎಚ್ಚೆತ್ತ ಕ್ರಿಕೆಟ್ ಸಂಸ್ಥೆ ಫೋಟೋವನ್ನು ಬದಲಿಸಿತು.
ಆಫ್ರಿಕಾ ಮಾಡಿದ ಎಡವಟ್ಟಿಗೆ ಆಕ್ರೋಶಗೊಂಡ ಅಭಿಮಾನಿಗಳು ಟ್ವೀಟಿಸುವ ಮುನ್ನ ಪರಿಶೀಲಿಸಿ ಎಂದು ಕಟು ಸಲಹೆ ನೀಡಿದ್ದಾರೆ.
Here's 50 up for Pujara, his 17th in Test cricket, and probably his slowest too. He took 173 balls. Remember he needed over 50 balls to get his first run. India 143/4 #SAvsIND#FreedomSeriespic.twitter.com/dniIGsRQwh