ಹರಾರೆ (ಜಿಂಬಾಂಬ್ವೆ): ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20 ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ತ್ರಿಕೋಣ ಸರಣಿಯಲ್ಲಿ 76 ಬಾಲ್ ಗಳಲ್ಲಿ 172 ರನ್ ಗಳಿಸುವುದರೊಡನೆ ಫಿಂಚ್ ದಾಖಲೆ ಬರೆದಿದ್ದಾರೆ.