ಕುಲದೀಪ್ ಮಾರಕ ಬೌಲಿಂಗ್; 268 ರನ್ ಗಳಿಗೆ ಇಂಗ್ಲೆಂಡ್ ಕಟ್ಟಿ ಹಾಕಿದ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಆರಂಭವಾಗಿದ್ದು, ಇಂಗ್ಲೆಂಡ್ ತಂಡವನ್ನು ಭಾರತ ತಂಡ 268ರನ್ ಗಳಿಗೆ ಕಟ್ಟಿ ಹಾಕಿದೆ.
ಕುಲದೀಪ್ ಯಾದವ್ ಬೌಲಿಂಗ್ ದಾಳಿ
ಕುಲದೀಪ್ ಯಾದವ್ ಬೌಲಿಂಗ್ ದಾಳಿ

ನಾಟಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಆರಂಭವಾಗಿದ್ದು, ಇಂಗ್ಲೆಂಡ್ ತಂಡವನ್ನು ಭಾರತ ತಂಡ 268ರನ್ ಗಳಿಗೆ ಕಟ್ಟಿ ಹಾಕಿದೆ.


ಭಾರತದ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 250 ರನ್ ಗಳನ್ನು ಕಲೆ ಹಾಕಿದರು. ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಜೇಸನ್ ರಾಯ್ ಮತ್ತು ಜಾನಿ ಬೇರ್ ಸ್ಚೋ ಇಂಗ್ಲೆಂಡ್ ತಂಡಕ್ಕೆ 73 ರನ್ ಗಳ ಉತ್ತಮ ಆರಂಭಿಕ ಜೊತೆಯಾಟ ನೀಡಿದರು.

ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಕುಲದೀಪ್ ಯಾದವ್ 38 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಜೇಸನ್ ರಾಯ್ ಅವರ ವಿಕೆಟ್ ಪಡೆದರು. ಇದಾದ ಕೆಲವೇ ಕ್ಷಣಗಳಲ್ಲಿ ಆಗತಾನೆ ಕಣಕ್ಕಿಳಿದಿದ್ದ ಜೋ ರೂಟ್ ರನ್ನು ಕೂಡ ಕುಲದೀಪ್ ಯಾದವ್ ಎಲ್ ಬಿಬಲೆಗೆ ಕೆಡವಿ ಔಟ್ ಮಾಡಿದರು. ಮತ್ತೆ ಇಂಗ್ಲೆಂಡ್ ತಂಡ ಕೇವಲ 1 ರನ್ ಪೇರಿಸಿದಾಗ ಉತ್ತಮವಾಗಿ ಆಡುತ್ತಿದ್ದ ಆರಂಭಿಕ ಆಟಗಾರ ಬೇರ್ ಸ್ಟೋರನ್ನು ಕೂಡ ಕುಲದೀಪ್ ಯಾದವ್ ಎಲ್ ಬಿ ಬಲೆಗೆ ಕೆಡವಿ ಔಟ್ ಮಾಡಿದರು.

ಕುಲದೀಪ್ ಯಾದವ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಸುಧಾರಿಸಿಕೊಳ್ಳುವಷ್ಟರಲ್ಲೇ ಮತ್ತೋರ್ವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಶಾಕ್ ನೀಡಿದರು. 19 ರನ್ ಗಳಿಸಿ ಕ್ರೀಸ್ ಗೆ ಅಂಟಿಕೊಂಡಿದ್ದ ಇಯಾನ್ ಮಾರ್ಗನ್ ರನ್ನು ಚಾಹಲ್ ಔಟ್ ಮಾಡಿದರು. ಬಳಿಕ ಕಣಕ್ಕಿಳಿದ ಬೆನ್ ಸ್ಟೋಕ್ಸ್ ಮತ್ತು ಜಾಸ್ ಬಟ್ಲರ್ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಗೆ ಬಲ ನೀಡಿದರು. ಇಬ್ಬರೂ 90 ರನ್ ಗಳ ಸಮಯೋಚಿತ ಜೊತೆಯಾಟ ನೀಡಿದರು. ಜಾಸ್ ಬಟ್ಲರ್ 53 ರನ್ ಗಳಿಸಿ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರೆ, ಅವರ ಬೆನ್ನಲ್ಲೇ ಆಗತಾನೆ ಅರ್ಧಶತಕ ಸಿಡಿಸಿದ್ದ ಬೆನ್ ಸ್ಟೋಕ್ಸ್ ಕೂಡ 50 ರನ್ ಗಳಿಸಿ ಮತ್ತದೇ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ಡೇವಿಡ್ ವಿಲ್ಲೇ ಬಂದಷ್ಟೇ ವೇಗವಾಗಿ 1 ರನ್ ಗಳಿಸಿ ಮತ್ತೆ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ರಾಹುಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಸಮಯೋಚಿತ ಬ್ಯಾಟಿಂಗ್ ಮಾಡಿದ ಅದಿಲ್ ರಷೀದ್ 22 ರನ್ ಗಳಿಸಿ ಇಂಗ್ಲೆಂಡ್ ತಂಡದ ಮೊತ್ತ 250ರ ಗಡಿ ದಾಟುವಂತೆ ನೋಡಿಕೊಂಡರು. 22 ರನ್ ಗಳಿಸಿದ್ದ ರಷೀದ್ ರನ್ನು ಉಮೇಶ್ ಯಾದವ್ ಔಟ್ ಮಾಡಿದರೆ, ಆ ಬಳಿಕ ಬಂದ ಲಿಯಾಮ್ ಪ್ರಂಕೆಟ್ ರನ್ನು ರನ್ ಔಟ್ ಮಾಡುವ ಮೂಲಕ ಇಂಗ್ಲೆಂಡ್ ತಂಡವನ್ನು 268 ರನ್ ಗಳಿಗೆ ಆಲ್ ಔಟ್ ಮಾಡಲಾಯಿತು.

ಅಂತಿಮವಾಗಿ ಇಂಗ್ಲೆಂಡ್ ತಂಡ 49.5 ಓವರ್ ಗಳಲ್ಲಿ 268 ರನ್ ಗಳಿಸಲು ಮಾತ್ರ ಶಕ್ತವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com