3ನೇ ಏಕದಿನ ಪಂದ್ಯ: ಇಂಗ್ಲೆಂಡ್ ಮಣಿಸಿದರೆ ಸರಣಿಯಷ್ಟೇ ಅಲ್ಲ ಅಪೂರ್ವ ದಾಖಲೆ ಕೂಡ ಟೀಂ ಇಂಡಿಯಾ ಪಾಲು

ಇಂಗ್ಲೆಂಡ್ ನ ಹೆಡಿಂಗ್ಲೆಯಲ್ಲಿ ಮಂಗಳವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದ್ದು, ಸರಣಿ ಜಯ ನಿಟ್ಟಿನಲ್ಲಿ ಮಾತ್ರವಲ್ಲ ಕಳೆದ 3 ವರ್ಷಗಳಿಂದ ತಾನು ಮುಂದುವರೆಸಿಕೊಂಡು ಬಂದಿರುವ ದಾಖಲೆ ಉತ್ತಮ ಪಡಿಸಿಕೊಳ್ಳಲೂ ಮಹತ್ವದ್ದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೆಡಿಂಗ್ಲೆ: ಇಂಗ್ಲೆಂಡ್ ನ ಹೆಡಿಂಗ್ಲೆಯಲ್ಲಿ ಮಂಗಳವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದ್ದು, ಸರಣಿ ಜಯ ನಿಟ್ಟಿನಲ್ಲಿ ಮಾತ್ರವಲ್ಲ ಕಳೆದ 3 ವರ್ಷಗಳಿಂದ ತಾನು ಮುಂದುವರೆಸಿಕೊಂಡು ಬಂದಿರುವ ದಾಖಲೆ ಉತ್ತಮ ಪಡಿಸಿಕೊಳ್ಳಲೂ ಮಹತ್ವದ್ದಾಗಿದೆ.
ಭಾರತ- ಇಂಗ್ಲೆಂಡ್ ನಡುವಿನ 3ನೇ ಹಾಗೂ ಸರಣಿಯ ಅಂತಿಮ ಏಕದಿನ ಪಂದ್ಯ ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿದೆ. ಪಂದ್ಯದೊಂದಿಗೆ ಸರಣಿ ಗೆದ್ದು ಸತತ 10ನೇ ದ್ವಿಪಕ್ಷೀಯ ಸರಣಿ ಮತ್ತು ಸತತ 7ನೇ ಏಕದಿನ ಸರಣಿ ಜಯಿಸಿದ ದಾಖಲೆ ಬರೆಯುವ ಲೆಕ್ಕಾಚಾರ ವಿರಾಟ್ ಕೊಹ್ಲಿ ಪಡೆಯದ್ದಾಗಿದೆ.
ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದ್ದ ಭಾರತ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ, 2ನೇ ಪಂದ್ಯದಲ್ಲಿ 86 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ತಂಡ ಭಾರತ ತಂಡಕ್ಕೆ ತಿರುಗೇಟು ನೀಡಿತ್ತು. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಇಂದು ನಡೆಯಲಿರುವ ಪಂದ್ಯ ಮಹತ್ವ ಪಡೆದುಕೊಂಡಿದೆ. 
ಈ ಜಯದೊಂದಿಗೆ ಐಸಿಸಿ ಏಕದಿನ ರ‍್ಯಾಂಕಿಂಗ್ ನಲ್ಲಿ ಇಂಗ್ಲೆಂಡ್ ತಂಡ ನಂ.1 ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿತು. ಅಗ್ರಸ್ಥಾನಕ್ಕೇರಬೇಕೆಂಬ ಭಾರತಕ್ಕೆ ನಿರಾಸೆಯನ್ನುಂಟು ಮಾಡಿತು. 
ದಾಖಲೆ ಮುಂದುವರಿಸುವ ತವಕ
ಇನ್ನು 2016ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಲ್ಲಿ ಏಕದಿನ ಸರಣಿ ಸೋತ ಬಳಿಕ, ಭಾರತ ಇನ್ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಸೋಲನ್ನು ಕಂಡಿಲ್ಲ. 2016ರ ಜೂನ್ ತಿಂಗಳಿನಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಅಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಜಯಿಸಿತ್ತು. ಆ ಬಳಿಕ ನ್ಯೂಜಿಲೆಂಡ್ (2 ಬಾರಿ), ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಶ್ರೀಲಂಕಾ (1 ಬಾರಿ), ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತವರು ಮತ್ತು ವಿದೇಶಿ ನೆಲದಲ್ಲಿ ವಿಜಯ ಪತಾಕೆ ಹಾರಿಸಿದೆ. 
ಅಲ್ಲದೇ 2011ರಿಂದ ಇಂಗ್ಲೆಂಡ್ ವಿರುದ್ಧ ಭಾರತ ಯಾವುದೇ ಏಕದಿನ ಸರಣಿಯನ್ನು ಸೋತಿಲ್ಲ. 7 ವರ್ಷಗಳಿಂದ ಉಳಿಸಿಕೊಂಡಿರುವ ದಾಖಲೆಯನ್ನು ಮತ್ತೆ ಮುಂದುವರಿಸುವ ಸುವರ್ಣ ಅವಕಾಶ ವಿರಾಟ್ ಕೊಹ್ಲಿ ಪಡೆಯ ಕೈಯಲ್ಲಿದೆ. 2017ರ ಜನವರಿಯಲ್ಲಿ ನಡೆದಿದ್ದ ಸರಣಿಯಲ್ಲೂ ಭಾರತ 2-1 ರ ಅಂತರದಿಂದ ಜಯಿಸಿತ್ತು. ಇದೀಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ ಮತ್ತೆ 2-1 ಅಂತರದಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com