ಓಡಿಐ ರ್ಯಾಕಿಂಗ್: ವಿರಾಟ್ ಕೊಹ್ಲಿ ಜೀವನ ಶ್ರೇಷ್ಠ ಸಾಧನೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಜೀವನ ಶ್ರೇಷ್ಠ 911 ರೇಟಿಂಗ್ ಅಂಕಗಳ ಸಾಧನೆ ಮಾಡುವ ಮೂಲಕ....
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಜೀವನ ಶ್ರೇಷ್ಠ 911 ರೇಟಿಂಗ್ ಅಂಕಗಳ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಏಕದಿನ ಪಂದ್ಯಗಳ ಬ್ಯಾಟಿಂಗ್‌‌ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.
ಇಂದು ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ.
ಇನ್ನು ಬೌಲರ್ ಕುಲದೀಪ್ ಯಾದವ್ ಅವರು ಆರನೇ ಸ್ಥಾನ ಪಡೆಯುವ ಮೂಲಕ ಇದೇ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಹೊರತಾಗಿಯೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, 75, 45 ಹಾಗೂ 71ರನ್ ಗಳಿಸುವ ಮೂಲಕ ಕೇವಲ ಎರಡು ಅಂಕಗಳನ್ನು ಮಾತ್ರ ಪಡೆದಿದ್ದಾರೆ. ಇದರೊಂದಿಗೆ ಅವರು ಒಟ್ಟು 911 ರೇಟಿಂಗ್ ಅಂಕಗಳನ್ನು ಗಳಿಸಿದ್ದಾರೆ. ಇದು ಏಕದಿನ ರ‍್ಯಾಂಕಿಂಗ್‌ನಲ್ಲಿ ಬ್ಯಾಟ್ಸ್‌ಮನ್ ಓರ್ವ ಗಿಟ್ಟಿಸಿಕೊಂಡಿರುವ ಆರನೇ ಶ್ರೇಷ್ಠ ರೇಟಿಂಗ್ ಅಂಕವಾಗಿದೆ.
1991ರಲ್ಲಿ ಆಸ್ಟ್ರೇಲಿಯಾದ ಡೀನ್ ಜೋನ್ಸ್ ಹೊಂದಿದ್ದ ಗರಿಷ್ಠ ಅಂಕಗಳ(918) ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರರೆಂದರೆ ಕೊಹ್ಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com