ಏಕದಿನ ಕ್ರಿಕೆಟ್: ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ಪಾಕ್, ಹಳೆಯ ದಾಖಲೆಗಳೆಲ್ಲಾ ಧೂಳಿಪಟ

ದುರ್ಬಲ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಅಬ್ಬರದ ಬ್ಯಾಟಿಂಗ್ ಮಾಡುವ ಹಲವು ದಾಖಲೆಗಳನ್ನು ಮುರಿದಿದೆ.
ದಾಖಲೆ ರನ್ ಚಚ್ಚಿದ ಫಕರ್ ಜಮಾನ್
ದಾಖಲೆ ರನ್ ಚಚ್ಚಿದ ಫಕರ್ ಜಮಾನ್
ಬಲವಾಯೋ: ದುರ್ಬಲ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಅಬ್ಬರದ ಬ್ಯಾಟಿಂಗ್ ಮಾಡುವ ಹಲವು ದಾಖಲೆಗಳನ್ನು ಮುರಿದಿದೆ.
ಜಿಂಬಾಬ್ವೆ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದ್ದು, ಗುರುವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಬರೊಬ್ಬರಿ 244 ರನ್ ಗಳ ಅಂತರದಲ್ಲಿ ಮಣಿಸಿದೆ. ಪಾಕಿಸ್ತಾನ ನೀಡಿದ 400ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಜಿಂಬಾಬ್ವೆ ತಂಡ 155 ರನ್ ಗಳಿಗೆ ಆಲೌಟ್ ಆಯಿತು. ಪರಿಣಾಮ 4ನೇ ಏಕದಿನ ಪಂದ್ಯದಲ್ಲೂ ಹೀನಾಯ ಸೋಲುಕಂಡಿತು.
ಇನ್ನು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಫಖರ್ ಜಮಾನ್ (210 ರನ್) ಹಾಗೂ ಇಮಾಮ್ ಉಲ್ ಹಕ್ (113 ರನ್) ದಾಖಲೆಯ ಜೊತೆವಾಡಿದರು. ಬರೊಬ್ಬರಿ 42 ಓವರ್ ಗಳನ್ನು ಎದುರಿಸಿದ ಈ ಜೋಡಿ 304 ರನ್ ಗಳ ದಾಖಲೆಯ ಜೊತೆಯಾಟವಾಡಿತು. ಬಳಿಕ 113ರನ್ ಗಳಿಸಿದ್ದ ಇಮಾಮ್ ಉಲ್ ಹಕ್ 113 ರನ್ ಗಳಿಸಿ ಮಸಕಜಾ ಬೌಲಿಂಗ್ ನಲ್ಲಿ ಔಟ್ ಆದರು. ಆ ಬಳಿಕ ಬಂದ ಆಸಿಫ್ ಅಲಿ ಕೂಡ ಅರ್ ಶತಕ ಸಿಡಿ ಪಾಕ್ ತಂಡದ ಮೊತ್ತ 350ರ ಗಡಿ ದಾಟಲು ನೆರವಾದರು. 
ಪ್ರಮುಖವಾಗಿ ಜಿಂಬಾಬ್ವೆ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ ಫಖರ್ ಜಮಾನ್ ಪಾಕಿಸ್ತಾನ ಈ ಹಿಂದಿನ ಹಳೆಯ ದಾಖಲೆಗಳನ್ನೆಲ್ಲಾ ಧೂಳಿ ಪಟ ಮಾಡಿದರು. ಕೇವಲ 156 ಎಸೆತಗಳನ್ನು ಎದುರಿಸಿದ ಫಖರ್ ಜಮಾನ್ ಅಜೇಯ 216 ರನ್ ಸಿಡಿಸಿದರು. ಆವರ ಈ ಅಮೋಘ ಇನ್ನಿಂಗ್ಸ್ ನಲ್ಲಿ 5 ಸಿಕ್ಸರ್ ಹಾಗೂ 24 ಬೌಂಡರಿಗಳು ದಾಖಲಾಗಿದ್ದವು.
ಹಳೆಯ ದಾಖಲೆಗಳೆಲ್ಲಾ ಧೂಳಿಪಟ
ಇನ್ನು ಪಾಕಿಸ್ತಾನ ತಂಡದ ಈ ಅಬ್ಬರದ ಬ್ಯಾಟಿಂಗ್ ಪರಿಣಾಮ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದ್ದ ಹಳೆಯ ಹಲವು ದಾಖಲೆಗಳು ಪತನವಾಗಿದೆ.
ಅಜೇಯ 210 ರನ್ ಸಿಡಿಸಿದ ಫಖರ್ ಜಮಾನ್ ಏಕದಿನ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಪರ ಗರಿಷ್ಠ ರನ್ ಗಳಿಸಿದ ಮೊದಲ ಆಟಗಾರರಾಗಿದ್ದಾರೆ. ಈ ಹಿಂದೆ ಪಾಕ್ ಪರ ಸಯ್ಯದ್ ಅನ್ವರ್ ಗಳಿಸಿದ್ದ 194 ರನ್ ಗಳೇ ಈ ವರೆಗಿನ ಗರಿಷ್ಠ ರನ್ ಗಳಿಕೆಯಾಗಿತ್ತು.
ಪಾಕಿಸ್ತಾನ ತಂಡದ ಪರ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಫಖರ್ ಜಮಾನ್ ಪಾತ್ರರಾಗಿದ್ದಾರೆ. 
ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವದ 5ನೇ ಆಟಗಾರನಾಗಿಯೂ ಫಖರ್ ಜಮಾನ್ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಭಾರತದ ರೋಹಿತ್ ಶರ್ಮಾ ಗಳಿಸಿರುವ 264 ರನ್ ಗಳು ಬ್ಯಾಟ್ಸಮನ್ ಒಬ್ಬರು ಗಳಿಸಿರುವ ಗರಿಷ್ಠ ರನ್ ಗಳಿಕೆಯಾಗಿದೆ. ಆ ಬಳಿಕ ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ (237), ವಿರೇಂದ್ರ ಸೆಹ್ವಾಗ್ (2019) ಮತ್ತು ಕ್ರಿಸ್ ಗೇಯ್ಲ್ (215 ರನ್) ಆ ಬಳಿಕದ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com