ಮಹಿಳಾ ಏಷ್ಯಾ ಕಪ್ ಟಿ20: ಭಾರತದ ವಿರುದ್ಧ ಬಾಂಗ್ಲಾ ಗೆ 7 ವಿಕೆಟ್ ಜಯ
ಕ್ರಿಕೆಟ್
ಮಹಿಳಾ ಏಷ್ಯಾ ಕಪ್ ಟಿ20: ಭಾರತದ ವಿರುದ್ಧ ಬಾಂಗ್ಲಾ ಗೆ 7 ವಿಕೆಟ್ ಜಯ
ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧ ಮುಗ್ಗರಿಸಿದೆ.
ಕೌಲಾಲಾಂಪುರ: ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧ ಮುಗ್ಗರಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಭಾರತ ವನಿತೆಯರು ಬಾಂಗ್ಲಾ ವಿರುದ್ಧ 7 ವಿಕೆಟ್ ಗಳಿಂದ ಪರಾಭವ ಅನುಭವಿಸಿದ್ದಾರೆ.
ಬಾಂಗ್ಲಾದೇಶದ ರುಮಾನಾ ಅಹ್ಮದ್, ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಗೆಲುವಿನ ರೂವಾರಿಗಳಾದರು.
ಮೊದಲಿಗೆ ಬ್ಯಾಟಿಂಗ್ ನಡೆಸಿದ್ದ ಭಾರತ ಮಹಿಳೆಯರು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 141 ರನ್ ಕಲೆ ಹಾಕಿದ್ದರು.
ಭಾರತದ ಪರವಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ (42) ಹಾಗೂ ದೀಪ್ತಿ ಶರ್ಮಾ (32) ಉತ್ತಮ ಜತೆಯಾಟ ನೀಡಿದ್ದರು
ಬಾಂಗ್ಲಾ ಪರವಾಗಿ ರುಮಾನಾ ಅಹ್ಮದ್ 21 ರನ್ ನೀಡಿ 3 ವಿಕೆಟ್ ಪಡೆದಿದ್ದರು.
ಭಾರತ ಒಡ್ಡಿದ್ದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ 19.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತ್ತು. ಬಾಂಗ್ಲಾ ಪರವಾಗಿ ಬಾಂಗ್ಲಾ, ಫರ್ಗಾನಾ ಹೊಕ್ ಅಜೇಯ ಅರ್ಧಶತಕ (52*) ರಮಾನಾ ಅಹ್ಮದ್ (42) ಗಳಿಸಿ ಮಿಂಚಿದ್ದರು.
ಈ ಸೋಲಿನೊಡನೆ ಸರಣಿಯಲ್ಲಿ ಸತತ ಮೂರನೇ ಜಯದ ನಿರೀಕ್ಷೆಯಲ್ಲಿದ್ದ ಭಾರತ ವನಿತೆಯರ ಕನಸು ಭಗ್ನವಾಗಿದೆ. ಆದರೆ ಸೋಲಿನ ಹೊರತೂ ಭಾರತ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು ಸತತ ಎರಡು ಗೆಲುವಿನೊಡನೆ 4 ಅಂಕಗಳನ್ನು ಕಲೆ ಹಾಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ