ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾಟ್ಸನ್ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ನಡೆಸಿಕೊಟ್ಟ ವೆಬ್ ಶೋನಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಯನ್ನು ಲಘು ಹಾಸ್ಯದ ಮೂಲಕ ಕೆಣಕ್ಕಿದ್ದಾರೆ.
ಕಳೆದ ಏಳು ವರ್ಷಗಳಿಂದ ಶಾಹೀದ್ ಆಫ್ರಿದಿ 36 ವರ್ಷದಲ್ಲೇ ನಿಂತಿದ್ದಾರೆ. ಅವರಿಗೆ ವಯಸ್ಸು ಎನ್ನುವುದೇ ಇಲ್ಲ. ಆಫ್ರಿದಿ ಸಾರ್ವಕಾಲಿಕ ಎವರ್ ಗ್ರೀನ್ ಕ್ರಿಕೆಟಿಗ ಎಂದು ವಾಟ್ಸನ್ ಹೇಳಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಶೇನ್ ವಾಟ್ಸನ್ ಶೋನಲ್ಲಿ ಕೆಲ ಹಾಸ್ಯಾತ್ಮಕ ಸಂಗತಿಗಳನ್ನು ಹೊರಹಾಕಿದರು.