ಬೆಂಗಳೂರು: ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟಕ್ಕೆ 6 ವಿಕೆಟ್ ನಷ್ಟಕ್ಕೆ 347 ಕಲೆ ಹಾಕಿದ್ದ ಭಾರತ ಶುಕ್ರವಾರ ಹಾರ್ದಿಕ್ ಪಾಂಡ್ಯ ರ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಗಳಿಗೆ ಆಲ್ ಔಟ್ ಆಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಕರ್ಷಕ ಅರ್ಧ ಶಕತ (71) ಗಳಿಸಿದ್ದಾರೆ.
ದಿನದ ಪ್ರಾರಂಭದಲ್ಲಿ ರವಿಚಂದ್ರನ್ ಅಶ್ವಿನ್ (18) ಬೇಗನೇ ಔಟಾದರೆ ರವೀಂದ್ರ ಜಡೇಜಾ (20) ಉಮೇಶ್ ಯಾದವ್ (26*) ಇಶಾಂತ್ ಶರ್ಮಾ (8) ಉತ್ತಮ ಮೊತ್ತ ಕಲೆಹಾಕಲು ನೆರವಾದರು.
ಹಾರ್ದಿಕ್ ಪಾಂಡ್ಯ ಒಟ್ಟು 94 ಎಸೆತಗಳಲ್ಲಿ 10 ಬೌಂಡರಿಗಳೊಡನೆ 71 ರನ್ ಗಳಿಸಿದ್ದರು.
ಆಫ್ಘಾನಿಸ್ತಾನ ಪರ ಯಮಿನ್ ಅಹ್ಮದ್‌ಜಾಯ್ 3, ವಫಾದಾರ್ 2, ರಾಶೀದ್ ಖಾನ್ 2, ಮುಜೀಬ್ ಉರ್ ರೆಹ್ಮಾನ್ ಹಾಗೂ ಮೊಹಮ್ಮದ್ ನಬಿ ತಲಾ 1 ವಿಕೆಟ್ ಕಿತ್ತರು.