ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು, ಟೀಂ ಇಂಡಿಯಾ ಮುಡಿಗೆ ನಿಡಹಾಸ್ ಟ್ರೋಫಿ

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ....
ಟ್ರೋಫಿಯೊಂದಿಗೆ ಭಾರತ ತಂಡ
ಟ್ರೋಫಿಯೊಂದಿಗೆ ಭಾರತ ತಂಡ
Updated on
ಕೊಲಂಬೊ: ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತ ನಾಲ್ಕು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದ್ದು, ಟೀಂ ಇಂಡಿಯಾ ನಿಡಹಾಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ. 
ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ, ಭಾರತ ಗೆಲ್ಲಲು 167ರನ್ ಗಳ ಟಾರ್ಗೆಟ್ ನೀಡಿತು.
ಬಾಂಗ್ಲಾ ಗುರಿ ಬೆನ್ನತ್ತಿದ ಭಾರತ, ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧ ಶತಕ ಹಾಗೂ ದಿನೇಶ್ ಕಾರ್ತಿಕ್ ಅವರ ಕೊನೆ ಬಾಲ್ ಸಿಕ್ಸ್ ನೊಂದಿಗೆ ರೋಚಕ ಗೆಲುವು ಸಾಧಿಸಿದೆ.
8 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಅಮೋಘ ಸಿಕ್ಸರ್‌ ಸಿಡಿಸಿ 29 ರನ್ ಗಳಿಸಿ ಅಜೇಯರಾಗುಳಿದ ದಿನೇಶ್ ಕಾರ್ತಿಕ್ ಪಂದ್ಯದ ನೈಜ ಹೀರೊ ಎನಿಸಿಕೊಂಡರು.

ಭಾರತದ ಪರ  ರೋಹಿತ್ ಶರ್ಮಾ 56,  ಶಿಖರ್ ಧವನ್ 10, ಸುರೇಶ್ ರೈನಾ 0, ಮನೀಷ್​ ಪಾಂಡೆ 28, ಕೆ.ಎಲ್​. ರಾಹುಲ್ 24, ವಿಜಯ್​ ಶಂಕರ್​ 17 ರನ್​ ಗಳಿಸಿದರು. 

ಬಾಂಗ್ಲಾದೇಶದ ಪರ ರುಬೆಲ್​ ಹುಸೇನ್​ 2, ಶಕೀಬ್​ ಅಲ್​ ಹಸನ್​ 1, ಮುಸ್ತಾಫಿಜರ್​ ರೆಹಮಾನ್​ 1 ವಿಕೆಟ್​ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com