ಕಳೆದ ತಿಂಗಳಲ್ಲಿ ಎರಡು ದಿನ ಶಮಿ ದುಬೈ ಹೋಟೆಲ್ ನಲ್ಲಿ ತಂಗಿದ್ದರು, ಬಿಸಿಸಿಐ ದೃಢೀಕರಣ

ಭಾರತೀಯ ವೇಗಿ ಮೊಹಮ್ಮದ್ ಶಮಿ ಕಳೆದ ಫೆಬ್ರವರಿ 17 ಹಾಗೂ 18ರಂದು ದುಬೈನ ಹೋಟೆಲ್ ನಲ್ಲಿ ತಂಗಿದ್ದರು ಎಂದು ಬಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ............
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ
ಮುಂಬೈ: ಭಾರತೀಯ ವೇಗಿ ಮೊಹಮ್ಮದ್ ಶಮಿ ಕಳೆದ ಫೆಬ್ರವರಿ 17 ಹಾಗೂ 18ರಂದು ದುಬೈನ ಹೋಟೆಲ್ ನಲ್ಲಿ ತಂಗಿದ್ದರು ಎಂದು ಬಾರತೀಯ  ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ)  ಕೊಲ್ಕತ್ತಾ ಪೊಲೀಸರಿಗೆ ದೃಢಪಡಿಸಿದೆ.
ಶಮಿ ಕಳೆದ ತಿಂಗಳ ವೇಳಾಪಟ್ಟಿಯನ್ನು ನೀಡುವಂತೆ ಕೋರಿ ಕೋಲ್ಕತ್ತಾ ಪೋಲೀಸರು ಬಿಸಿಸಿಐ ಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಈ ಸ್ಪಷ್ಟನೆ ನಿಡಿದೆ. ಶಮಿ ಅವರ ಪತ್ನಿ ಹಸೀನ್ ಜಹಾನ್ ಹೇಳಿಕೆಯಂತೆಯೇ ಶಮಿ ದುಬೈನಲ್ಲಿ ನೆಲೆಸಿದ್ದದ್ದು ಹೌದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪೋಲೀಸರು ಬಿಸಿಸಿಐ ನಿಂದ ಮಾಹಿತಿ ಕೋರಿದ್ದರು.
ಶಮಿ ಅವರ ಪತ್ನಿ ಮಾಡಿದ ಆರೋಪ ಸಂಬಂಧ ತನಿಖೆಗಾಗಿ ಕೋಲ್ಕತ್ತಾ ಪೋಲೀಸರು ಇದೇ ವಾರದ ಪ್ರಾರಂಭದಲ್ಲಿ ಉತ್ತರ ಪ್ರದೇಶದ ಅಲ್ಮೋರಾದಲ್ಲಿನ ಶಮಿ ನಿವಾಸಕ್ಕೆ ಭೇಟಿ ನೀಡಿದ್ದರು. ಆಗ ಶಮಿ ಹಾಗೂ ಅವರ ಕುಟುಂಬ ತನಿಖೆ ನಡೆಸುವ ಅಧಿಕಾರಿಗಳಿಗೆ ತಮ್ಮ ಕಡೆಯಿಂದ ಸಂಪೂರ್ಣ್ ಅಸಹಕಾರ ನೀಡಿತ್ತು.
ಶಮಿ ತನಗೆ ಅನೇಕ ಬಾರಿ ದೈಹಿಕ ಮಾನಸಿಕ ಕಿರುಕುಳ ನೀಡಿದ್ದರು. ಅವರು ಇತರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಾರೆ ಎಂದು ಶಮಿ ಪತ್ನಿ ಹಸೀನ್ ಜಹಾನ್ ಆರೋಪಿಸಿದ್ದರು.ಇದಕ್ಕಾಗಿ ಶಮಿ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು ಸೆಕ್ಷನ್ 376(ಅತ್ಯಾಚಾರ) ಸೇರಿ ಅನೇಕ ವಿಭಾಗಗಳಡಿಯಲ್ಲಿ ಜಾಮೀನು ರಹಿತ ಪ್ರಕರಣಗಳು ದಾಖಲಾಗಿದ್ದವು. ಅದಾಗ್ಯೂ ಶಮಿ ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ನನ್ನ ಪತ್ನಿಯನ್ನು ಯಾರೋ ತಪ್ಪು ದಾರಿಗೆಳೆಯುತ್ತಿದ್ದಾರೆ. ಅವರ ಪ್ರಭಾವದಿಂದಾಗಿ ಆಕೆ ನನ್ನ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂಡು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com