34 ಕೋಟಿ ರು. ಮೌಲ್ಯದ ಐಷಾರಾಮಿ ಫ್ಲಾಟ್ ಬೇಡ ಅಂದ ವಿರಾಟ್ ಕೊಹ್ಲಿ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅವರು ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿ ಮಾಡಿದ್ದರು ಎಂದು ಹೇಳಲಾಗಿತ್ತು.
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅವರು ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿ ಮಾಡಿದ್ದರು ಎಂದು ಹೇಳಲಾಗಿತ್ತು.
ಆದರೆ ಇದೀಗ ಆ ಫ್ಲಾಟ್ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಐಷಾರಾಮಿ ಫ್ಲಾಟ್ ಇನ್ನು ರೆಡಿಯಾಗದ ಕಾರಣ ಸದ್ಯಕ್ಕೆ ಕೊಹ್ಲಿ ಎರಡು ವರ್ಷಗಳಿಗೆ ಬಾಡಿಗೆ ಅಪಾರ್ಟ್ ಮೆಂಟ್ ಒಂದನ್ನು ಪಡೆದಿದ್ದರು.
ಮುಂಬೈನ ವರ್ಲಿಯಲ್ಲಿ ಐಷಾರಾಮಿ ಫ್ಲಾಟ್ ಖರೀದಿಗೆ ವಿರಾಟ್ ಕೊಹ್ಲಿ ಮಾಡಿಕೊಂಡಿದ್ದ 34 ಕೋಟಿ ರುಪಾಯಿ ಒಪ್ಪಂದ ರದ್ದುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ವಿರಾಟ್ ಕೊಹ್ಲಿ ಬಾಂದ್ರಾ ಅಥವಾ ವರ್ಸೋವಾ ಪ್ರದೇಶದಲ್ಲಿ ಪೆಂಟ್ ಹೌಸ್ ಒಂದಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರಂತೆ.