ಐಪಿಎಲ್ 2018: ಆರ್ ಸಿಬಿ ತಂಡಕ್ಕೆ ಕಾಲ್ಟರ್ ನೈಲ್ ಬದಲಿಗೆ ಕೋರಿ ಅ್ಯಂಡರ್ಸನ್ ಸೇರ್ಪಡೆ

2018ನೇ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಸಮರ್ಥ ಆಟಗಾರರ ಜೋಡಣೆಗೆ ಫ್ರಾಂಚೈಸಿಗಳು ಮುಂದಾಗಿದ್ದು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಕೋರಿ ಅ್ಯಂಡರ್ಸನ್ ಸೇರ್ಪಡೆಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 2018ನೇ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಸಮರ್ಥ ಆಟಗಾರರ ಜೋಡಣೆಗೆ ಫ್ರಾಂಚೈಸಿಗಳು ಮುಂದಾಗಿದ್ದು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಕೋರಿ ಅ್ಯಂಡರ್ಸನ್ ಸೇರ್ಪಡೆಯಾಗಿದ್ದಾರೆ.
ಆರ್ ಸಿಬಿಗೆ ಸೇರ್ಪಡೆಯಾಗಿದ್ದ ಆಸ್ಟ್ರೇಲಿಯಾ ತಂಡದ ವೇಗಿ ಕಾಲ್ಟರ್ ನೈಲ್ ಗಾಯಗೊಂಡಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಕಾಲ್ಟರ್ ನೈಲ್ ಐಪಿಎಲ್ ಟೂರ್ನಿಯಿಂದ ದೂರ ಉಳಿಯಲಿದ್ದು, ಕಾಲ್ಟರ್ ನೈಲ್ ಬದಲಿಗೆ ನ್ಯೂಜಿಲೆಂಡ್ ತಂಡದ ಕೋರಿ ಆ್ಯಂಡರ್ಸನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಐಪಿಎಲ್ ಸಮಿತಿ ಸ್ಪಷ್ಟನೆ ನೀಡಿದ್ದು, ನಾಥನ್ ಕಾಲ್ಟರ್ ನೈಲ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಸರಣಿಯಲ್ಲಿ ಅವರು ಆಡುವುದು ಅನುಮಾನವಾಗಿದೆ ಎಂದು ಹೇಳಿದ್ದಾರೆ.
ಇನ್ನು ಕಿವೀಸ್ ತಂಡದ ಪ್ರಮುಖ ವೇಗಿಯಾಗಿರುವ ಕೋರಿ ಆ್ಯಂಡರ್ಸನ್, ಕಳೆದ ಐಪಿಎಲ್ ಸೀಸನ್ ನಲ್ಲಿ ಕೋಲ್ಕತಾ ತಂಡದ ಪರವಾಗಿ ಆಡಿದ್ದರು. ಒಟ್ಟು 8 ಪಂದ್ಯಗಳಿಂದ ಒಟ್ಟು 15 ವಿಕೆಟ್ ಕಬಳಿಸಿ ಆ್ಯಂಡರ್ಸನ್ ಆಯ್ಕೆದಾರರ ಗಮನ ಸೆಳೆದಿದ್ದರು. ಇತ್ತೀಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆ್ಯಂಡರ್ಸನ್ ರನ್ನು ಆರ್ ಸಿಬಿ ಫ್ರಾಂಚೈಸಿಗಳು 2 ಕೋಟಿಗೆ ಖರೀದಿ ಮಾಡಿದ್ದರು.
ಹಾಲಿ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ತಂಡದ ಯಾತ್ರೆ ಏಪ್ರಿಲ್ 18ರಿಂದ ಆರಂಭವಾಗಲಿದ್ದು, ಕೋಲ್ಕತಾ ಆರ್ ಸಿಬಿಯ ಮೊದಲ ಎದುರಾಳಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com