ಚೆಂಡು ವಿರೂಪ ವಿವಾದ : ಸ್ಮೀತ್ ನನ್ನು ನಾಯಕ ಸ್ಥಾನದಿಂದ ವಜಾಗೊಳಿಸಲು ಆಸ್ಟ್ರೇಲಿಯಾ ಸರ್ಕಾರ ಸೂಚನೆ

ಚೆಂಡು ವಿರೂಪಗೊಳಿಸಿದ ವಿವಾದದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ವೀವನ್ ಸ್ಮೀತ್ ನನ್ನು ಆ ಸ್ಥಾನದಿಂದ ವಜಾಗೊಳಿಸುವಂತೆ ಅಲ್ಲಿನ ಸರ್ಕಾರ ಕ್ರಿಕೆಟ್ ಮಂಡಳಿಗೆ ಸೂಚಿಸಿದೆ.
ಸ್ಟೀವನ್ ಸ್ಮೀತ್
ಸ್ಟೀವನ್ ಸ್ಮೀತ್

ಆಸ್ಟ್ರೇಲಿಯಾ: ಚೆಂಡು ವಿರೂಪಗೊಳಿಸಿದ ವಿವಾದದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಸ್ವೀವನ್ ಸ್ಮೀತ್ ನನ್ನು ನಾಯಕ ಸ್ಥಾನದಿಂದ ವಜಾಗೊಳಿಸುವಂತೆ ಅಲ್ಲಿನ ಸರ್ಕಾರ ಕ್ರಿಕೆಟ್ ಮಂಡಳಿಗೆ ಸೂಚಿಸಿದೆ.

ಈ ವಿವಾದ ಬಗೆಹರಿಯುವವರೆಗೂ ಸ್ಟೀವನ್ ಸ್ಮೀತ್  ನಾಯಕನಾಗಿ ಆಟ ಆಡುವಂತಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ.ಇದೊಂದು ದುರದೃಷ್ಟಕರ ಘಟನೆ ಎಂದು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಮಾಲ್ಕಾಮ್ ಟರ್ನ್ ಬುಲ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಆಘಾತವಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮೋಸದಲ್ಲಿ ಭಾಗಿಯಾಗಿರುವುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ   ಅಧ್ಯಕ್ಷ ಡೇವಿಡ್ ಫೀವರ್ ಜೊತೆ ಮಾತುಕತೆ ನಡೆಸಿದ್ದು, ದಕ್ಷಿಣ ಆಫ್ರಿಕಾದಲ್ಲಿನ ಘಟನೆ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ.  ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಪ್ರಧಾನಿ ಟರ್ನ್ ಬುಲ್ ಹೇಳಿದ್ದಾರೆ,.

 ಆಸ್ಟ್ರೇಲಿಯಾ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ  ಆ ದೇಶದ ಕ್ರೀಡಾ ಆಯೋಗ ಮತ್ತಿತರ ಸಂಸ್ಥೆಗಳು ಆಗ್ರಹಿಸಿವೆ. ಕ್ರೀಡೆಯಲ್ಲಿ ಯಾವುದೇ ರೀತಿಯ ಮೋಸವನ್ನು ಖಂಡಿಸುವುದಾಗಿ ಆಸ್ಟ್ರೇಲಿಯಾ ಕ್ರೀಡಾ ಆಯೋಗ ತಿಳಿಸಿದೆ.

2015 ರಿಂದಲೂ ಸ್ವೀವನ್ ಸ್ಮೀತ್ ನಾಯಕನಾಗಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಿನ್ನೆ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಕೆಲ ಹಿರಿಯ ಆಟಗಾರರು ಹಾಗೂ ಸ್ಮೀತ್ ಚೆಂಡನ್ನು ವಿರೂಪಗೊಳಿಸಿರುವ ಆರೋಪ ಕೇಳಿಬಂದಿದೆ.

ಆರಂಭಿಕ ಬ್ಯಾಟ್ಸ್ ಮನ್ ಕ್ಯಾಮರೂನ್ ಬ್ಯಾನ್ ಕ್ರೋಪ್ಟ್, ಈ ಯೋಜನೆ ಕಾರ್ಯಗತಗೊಳಿಸಿದ್ದು, ಟೇಪ್ ಬಳಕೆ ಮಾಡಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.  ಇದರಿಂದಾಗಿ ಐಸಿಸಿ ಆತನನ್ನು ಒಂದು ಪಂದ್ಯದಿಂದ ನಿರ್ಬಂಧಿಸಿ, ಪಂದ್ಯದ ಶುಲ್ಕದಲ್ಲಿ ಶೇ.100 ರಷ್ಟು ದಂಡ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com