2018ರ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ 15 ನಿಮಿಷದ ಡ್ಯಾನ್ಸ್‌ಗೆ ರಣವೀರ್‌ಗೆ 5 ಕೋಟಿ?

ಜಗತ್ತಿನ ಅತೀ ಶ್ರೀಮಂತ ಪಂದ್ಯಾವಳಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಗೆ ದಿನಗಣನೆ ಪ್ರಾರಂಭವಾಗಿದೆ...
ರಣವೀರ್ ಸಿಂಗ್
ರಣವೀರ್ ಸಿಂಗ್
Updated on: 
ಜಗತ್ತಿನ ಅತೀ ಶ್ರೀಮಂತ ಪಂದ್ಯಾವಳಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಗೆ ದಿನಗಣನೆ ಪ್ರಾರಂಭವಾಗಿದೆ. 
ಏಪ್ರಿಲ್ 7ರಂದು ಐಪಿಎಲ್ ಲೀಗ್ ಗೆ ಅದ್ಧೂರಿ ಚಾಲನೆ ಸಿಗಲಿದ್ದು ಉದ್ಘಾಟನಾ ಸಮಾರಂಭದಲ್ಲಿ 15 ನಿಮಿಷದ ಡ್ಯಾನ್ಸ್ ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಗೆ 5 ಕೋಟಿ ರುಪಾಯಿಗೆ ಆಫರ್ ಮಾಡಲಾಗಿದೆ. 
ಉದ್ಘಾಟನಾ ಸಮಾರಂಭದಲ್ಲಿ ರಣವೀರ್ ಸಿಂಗ್ ಕೇವಲ 15 ನಿಮಿಷ ಮಾತ್ರ ಸ್ಟೇಜ್ ಪರ್ ಫಾರ್ಮ್ ನೀಡಬೇಕಿದೆ. ಇದಕ್ಕೆ ಬರೋಬ್ಬರಿ 5 ಕೋಟಿ ರುಪಾಯಿ ಆಫರ್ ನೀಡಲಾಗಿದೆ. 
ಹಿಂದಿಯ ಪದ್ಮಾವತಿ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದು ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ಈ ಚಿತ್ರದ ಯಶಸ್ಸಿನಿಂದಾಗಿ ರಣವೀರ್ ಡಿಮ್ಯಾಂಡ್ ಕೂಡ ಹೆಚ್ಚಿದೆ. 
ರಣವೀರ್ ಗೆ ಸಾಕಷ್ಟು ಚಿತ್ರಗಳ ಆಫರ್ ಗಳು ಬರುತ್ತಿದ್ದು ಇದರ ಜತೆಗೆ ಅವರ ಸಂಭಾವನೆ ಕೂಡ ಜಾಸ್ತಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com