ಚೆಂಡು ವಿರೂಪ ಪ್ರಕರಣದಿಂದ ಸ್ಟೀವ್ ಸ್ಮಿತ್, ಸಹ ಆಟಗಾರರನ್ನು ಅಳೆಯಬಾರದು: ರೋಹಿತ್ ಶರ್ಮಾ

ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್ ಕ್ರಾಫ್ಟ್ ಅವರನ್ನುಅಳೆಯಬಾರದು ಎಂದು...
ರೋಹಿತ್ ಶರ್ಮಾ-ಸ್ಟೀವ್ ಸ್ಮಿತ್
ರೋಹಿತ್ ಶರ್ಮಾ-ಸ್ಟೀವ್ ಸ್ಮಿತ್
ನವದೆಹಲಿ: ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್ ಕ್ರಾಫ್ಟ್ ಅವರನ್ನುಅಳೆಯಬಾರದು ಎಂದು ಟೀಂ ಇಂಡಿಯಾದ ಆಟಗಾರ ರೋಹಿತ್ ಶರ್ಮಾ ಹೇಳಿದ್ದಾರೆ. 
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸಿದ ಪ್ರಕರಣದ ಸಂಪೂರ್ಣ ಹೊಣೆ ಹೊತ್ತಿರುವ ಸ್ಟೀವ್ ಸ್ಮಿತ್ ಸಿಡ್ನಿಯಲ್ಲಿ ಸುದ್ದಿಗೋಷ್ಠಿಸಿ ನಡೆಸಿ ಮಾತನಾಡಿದರು ಈ ವೇಳೆ ಕಣ್ಣೀರಿಟ್ಟಿ ಅವರು ಘಟನೆಗೆ ಸಂಬಂಧಿಸಿದಂತೆ ತಮ್ಮ ಪೋಷಕರ ಹಾಗೂ ಆಸೀಸ್ ಜನರ ಕ್ಷಮೆ ಕೇಳಿದ್ದಾರೆ. ಅದೇ ರೀತಿ ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಸಹ ಕ್ಷಮೆಯಾಚಿಸಿದ್ದರು. 
ಜೋಹಾನ್ಸ್ ಬರ್ಗ್ ವಿಮಾನ ನಿಲ್ದಾಣದಲ್ಲಿ ಅವರನ್ನು ಅಪರಾಧಿಯಂತೆ ಭದ್ರತೆಯಲ್ಲಿ ಕಳುಹಿಸಿಕೊಡಲಾಗಿದೆ. ಒಂದು ಶ್ರೇಷ್ಠ ಆಟಗಾರನನ್ನು ಈ ರೀತಿ ನಡೆಸಿಕೊಳ್ಳಬಾರದು. ಸಿಡ್ನಿಯ ಪತ್ರಿಕಾಗೋಷ್ಠಿಯಲ್ಲಿ ಆಟಗಾರರು ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ತಾವು ಮಾಡಿದ ಕೃತ್ಯವನ್ನು ಸಹ ಒಪ್ಪಿಕೊಂಡಿದ್ದು ಚೆಂಡು ವಿರೂಪ ಪ್ರಕರಣವನ್ನು ಮುಂದಿಟ್ಟುಕೊಂಡು ಅವರನ್ನು ವ್ಯಾಖ್ಯಾನಿಸಬಾರದು. ಆಟಗಾರರ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧ ಹೇರಿರುವುದು ಸರಿಯಲ್ಲ. ಅವರೆಲ್ಲಾ ಶ್ರೇಷ್ಠ ಆಟಗಾರರು ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಗೆ ಒಂದು ವರ್ಷ ನಿಷೇಧ ಮತ್ತು ಬ್ಯಾನ್ ಕ್ರಾಫ್ಟ್ ಒಂಬತ್ತು ತಿಂಗಳು ನಿಷೇಧ ಹೇರಲಾಗಿದೆ. ಅಲ್ಲದೆ ಸ್ಮಿತ್ ಹಾಗೂ ವಾರ್ನರ್ ಇಬ್ಬರೂ ಆಟಗಾರರನ್ನು ಈ ವರ್ಷದ ಐಪಿಎಲ್ ನಿಂದ ಉಚ್ಚಾಟಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com