ದಕ್ಷಿಣ ಆಫ್ರಿಕಾ ಸರಣಿ ನಂತರ ಆಸೀಸ್ ಕೋಚ್ ಸ್ಥಾನಕ್ಕೆ ಲೆಹ್ಮನ್ ರಾಜಿನಾಮೆ

ಚೆಂಡು ವಿರೂಪಗೊಳಿಸದ ಪ್ರಕರಣದಿಂದಾಗಿ ಭಾವನಾತ್ಮಕ ಒತ್ತಡಕ್ಕೆ ಸಿಲುಕಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ...
ಡ್ಯಾರೆನ್ ಲೆಹ್ಮನ್
ಡ್ಯಾರೆನ್ ಲೆಹ್ಮನ್
ಜೋಹನ್ಸ್ ಬರ್ಗ್: ಚೆಂಡು ವಿರೂಪಗೊಳಿಸದ ಪ್ರಕರಣದಿಂದಾಗಿ ಭಾವನಾತ್ಮಕ ಒತ್ತಡಕ್ಕೆ ಸಿಲುಕಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಡ್ಯಾರೆನ್ ಲೆಹ್ಮನ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ನಂತರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಆಸ್ಟ್ರೇಲಿಯಾ ಕೋಚ್ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಡ್ಯಾರೆನ್ ಲೆಹ್ಮನ್ ಹೇಳಿದ್ದಾರೆ.
ಸ್ಟೀವ್ ಸ್ಮಿತ್ ಮತ್ತು ಕ್ಯಾಮರಾನ್ ಬೆನ್ ಕ್ರಾಫ್ಟ್ ಅವರು ತವರಿಗೆ ಮರಳಿಂದ ನಂತರ ಚೆಂಡು ವಿರೂಪಗೊಳಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿರುವುದನ್ನು ಸುದ್ದಿ ವಾಹಿನಿಯಲ್ಲಿ ನೋಡಿದ ನಂತರ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಲೆಹ್ಮನ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಕ್ರಿಕೆಟಿಗ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು. ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ನಾಯಕ ಸ್ಟೀವ್ ಸ್ಮಿತ್ ತಪ್ಪೊಪ್ಪಿಕೊಂಡಿದ್ದರು. 
ಇದಾದ ಬಳಿಕ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ನಾಯಕ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮೇಲೆ ಒಂದು ವರ್ಷ ಹಾಗೂ ಬೆನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳುಗಳ ನಿಷೇಧವನ್ನು ವಿಧಿಸಿದೆ. ಆದರೆ ಕೋಚ್‌ಗೆ ಮೋಸದಾಟದ ಬಗ್ಗೆ ಅರಿವೇ ಇರಲಿಲ್ಲ ಎಂದು ಹೇಳಿ ಕ್ಲೀನ್ ಚಿಟ್ ನೀಡಲಾಗಿತ್ತು. ಆದರೂ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಲು ಲೆಹ್ಮನ್ ನಿರ್ಧರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com