ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ವೇತನಕ್ಕೆ ಬಂಡಾಯ ಎದ್ದಿದ್ದಕ್ಕೆ ಸ್ಮಿತ್, ವಾರ್ನರ್ಗೆ ನಿಷೇಧದ ಶಿಕ್ಷೆ:? ಗಂಭೀರ್

ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್ ಕ್ರಾಫ್ಟ್ ಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧ ಹೇರಿರುವುದಕ್ಕೆ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಹೊಸ ಆಯಾಮ ನೀಡಿದ್ದಾರೆ...
ಡೇವಿಡ್ ವಾರ್ನರ್-ಸ್ಟೀವ್ ಸ್ಮಿತ್
ಡೇವಿಡ್ ವಾರ್ನರ್-ಸ್ಟೀವ್ ಸ್ಮಿತ್
ನವದೆಹಲಿ: ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್ ಕ್ರಾಫ್ಟ್ ಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧ ಹೇರಿರುವುದಕ್ಕೆ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಹೊಸ ಆಯಾಮ ನೀಡಿದ್ದಾರೆ. 
ವೇತನ ಹೆಚ್ಚಳ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ತಿರುಗಿಬಿದ್ದಿದ್ದ ಸ್ಟೀವ್ ಸ್ಮಿತ್ ಹಾಗೂ ದೇವಿಡ್ ವಾರ್ನರ್ ವಿರುದ್ಧ ಜೇಮ್ಸ್ ಸುದರ್ ಲೆಂಡ್ ಹಾಗೂ ಕ್ರಿಕೆಟ್ ಸಮಿತಿಯ ಇನ್ನಿತರ ಮುಖ್ಯಸ್ಥರು ನಿಷೇಧ ಹೇರುವ ಮೂಲಕ ಸೇಡು ತೀರಿಸಿಕೊಂಡಿದ್ದಾರಾ ಎಂದು ಗಂಭೀರ್ ಪ್ರಶ್ನಿಸಿದ್ದಾರೆ. 
ಕ್ರಿಕೆಟ್ ಆಟ ಭ್ರಷ್ಟಾಚಾರ ಮುಕ್ತವಾಗಬೇಕು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಕೈಗೊಂಡಿರುವ ಕ್ರಮ ಅಗತ್ಯಕ್ಕಿಂತ ಹೆಚ್ಚು ಕಠಿಣವೆನಿಸುತ್ತಿದೆ. ವಾರ್ನರ್ ಹಾಗೂ ಸ್ಮಿತ್ ತಮ್ಮ ಕ್ರಿಕೆಟ್ ಸಂಸ್ಥೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ರೀತಿ ಬೆಲೆ ತೆರುತ್ತಿದ್ದಾರೆಯೇ ಎಂದರು.
ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಧ್ವನಿ ಎತ್ತುವವರನ್ನು ಬಗ್ಗಿಸುವುದು ಕ್ರಿಕೆಟ್ ಆಡಳಿತಕ್ಕೆ ಹೊಸದೇನಲ್ಲ. ಇಯಾನ್ ಚಾಪೆಲ್ ಇದಕ್ಕೆ ಉತ್ತಮ ಉದಾಹರಣೆ ಎಂದು ಗಂಭೀರ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com