ಇದೇ ವೇಳೆ ಬಿಸಿಸಿಐನ ನಿರ್ವಹಣಾ ಮಂಡಳಿ ಸಿದ್ಧವಾಗುವವರೆಗೂ ಯಾವುದೇ ರಾಜ್ಯ ಕ್ರಿಕೆಟ್ ಮಂಡಳಿಗಳೂ ಚುನಾವಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ 7ನೇ ಸ್ಥಿತಿಗತಿ ವರದಿಯಲ್ಲಿ ಹೇಳಿದೆ. ಇನ್ನು ಸುಪ್ರೀಂ ಕೋರ್ಟ್ ನಿಂದ ನೇಮಕವಾಗಿದ್ದ ಬಿಸಿಸಿಐನ ನಿರ್ವಾಹಕ ಸಮಿತಿಯ ಸದಸ್ಯರಾದ ವಿನೋದ್ ರಾಯ್ ಮತ್ತು ಡಯಾನ ಎಡುಲ್ಜಿ ಅವರು, ಬಿಸಿಸಿಐ ಪದಾಧಿಕಾರಿಗಳ ಚುನಾವಣೆಗೆ ಶಿಫಾರಸ್ಸು ಮಾಡಿತ್ತು. ಹಾಲಿ ಇರುವ ನಿಯೋಜಿತ ಅಧ್ಯಕ್ಷ ಸಿಕೆ ಖನ್ನಾ, ನಿಯೋಜಿತ ಕಾರ್ಯದರ್ಶಿ ಅಮಿತಾಬ್ ಚೌದರಿ, ಖಜಾಂಚಿ ಅನಿರುದ್ಧ್ ಚೌದರಿ ಮತ್ತಿತರರ ಬದಲಾವಣೆಗೆ ನಿರ್ವಾಹಕ ಸಮಿತಿ ಮುಂದಾಗಿತ್ತು. ಆದರೆ ಈ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದೆ.